ಮಳೆ ಹಾನಿಗೆ ಮನೆ ಬಿದ್ದ ನಿರಾಶ್ರಿತರಿಗೆ ಪರಿಹಾರ ಅಂತಾ ಹೋದ್ರೆ, ತಲಾಟಿಗೆ 50,000ಸಾವಿರ ಲಂಚ್ ಕೊಡಬೇಕಂತೆ
ಲಂಚ ಲಂಚ್ ಬರೀ ಎಲ್ಲಿ ಹೋದ್ರು ಲಂಚ್ ಎಲ್ಲಾ ಅಧಿಕಾರಗಳ ಬಾಯಲ್ಲಿ ಮೊದಲು ಬರುವ ಮಾತೆ ಲಂಚ್ ಕೊಡ್ತಿಯಾ ಅಂತಾ, ಸರ್ಕಾರ ಬಡವರಿಗೆ, ಮನೆ ಕಳೆದುಕೊಂಡ ನಿರಾಶ್ರಿತರ ಅನುಕೂಲಕ್ಕಾಗಿ ಕೆಲವು ಯೋಜನೆ ಜಾರಿಗೆ ತಂದ್ರೆ, ಅಧಿಕಾರಿಗಳು ಲಂಚ್ ದ ಆಶೆಗೆ ಶ್ರೀಮಂತರಿಗೆ ಮಾರಿಕೋಳುತ್ತಿದ್ದಾರೆ. ಮಳೆಯಿಂದ ಮನೆಯ ಕಳೆದುಕೊಂಡ ನಿರಾಶ್ರಿತರಿಗೆ ಸರ್ಕಾರ ಮರಳಿ ಮನೆ ಕಟ್ಟಿಕೋಳಲು ಹಣ ಮುಂಜುರ ಮಾಡಲು ಕೆಲವು ಯೋಜನೆ ತಂದ್ರು, ಪ್ರಯೋಜ ಆಗ್ತಿಲ್ಲ, ಅದ್ರೇ ದೇವರು ವರ ಕೊಟ್ಟರು, ಪೂಜಾರಿ ಒಳಗೆ ಬಿಡ್ತಿಲ್ಲ, ಅನ್ನುವ ಸ್ಥಿತಿ ಬಡವರ ಜೀವನ ಆಗಿದೆ. ಎನ್ನಿದು ಅಂತಿರಾ ಈ ಸ್ಟೋರಿ ನೋಡಿ. ಹೌದು ಅತೀ ಸೃಷ್ಟಿ ಮಳೆಯಿಂದ ಅನೇಕ ಜನರ ಮನೆಗಳು ಮತ್ತು ಬೆಳೆಗಳು ನೀರು ಪಾಲಗಿವೆ. ಈ ಪೈಕಿ ಧಾರವಾಡ ತಾಲೂಕಿನ ಮರೇವಾಡ ಗ್ರಾಮದಲ್ಲಿ ಅತೀ ಸೃಷ್ಟಿ ಮಳೆಯಿಂದ 2018-19ರಲ್ಲಿ ಎರಡು ಮನೆಗಳು ಬಿದ್ದಿವೆ, ಎರಡ ಮೂರ ವರ್ಷಗಳು ಕಳೆದ್ರು, ಇನ್ನುವರೆಗೆ ಪರಿಹಾರ ಸಿಕ್ಕಿಲ್ಲ, ಕಾರಣ ಅಂದ್ರೆ ಗ್ರಾಮ ಲೆಕ್ಕಧಿಕಾರಿಗೆ ಲಂಚ್ ನೀಡಿಲ್ಲ, ಲಂಚ್ ಕೊಟ್ಟವರಿಗೆ ಮಾತ್ರ ಸರ್ಕಾರದ ಹಣ ಮುಂಜುರ ಮಾಡಿದ್ದಾರೆ. ಮರೇವಾಡ ಈ ಎರಡು ಕುಟುಂಬದವರು ತುಂಬಾ ಬಡವರು, ತಲಾಟಿಗೆ ಲಂಚ್ ನೀಡಿದ ಈ ಎರಡು ಮನೆಗಳು ಯಾವುದೇ ಪರಿಹಾರ ಸಿಗದೆ ಇನ್ನು ಹಾಗೇ ಇವೆ. ಈ ಕುಟುಂಬದವರ ಗೋಳು ಕೇಳವರೇ ಇಲ್ಲ. ಅತಿ ವೃಷ್ಟಿ ಮಳೆಯಿಂದ ಮನೆ ಬಿದ್ದ ಮನೆಗಳಲ್ಲಿ ಮರೆವಾಡ ಗ್ರಾಮದಲ್ಲಿ 2018 ರಲ್ಲಿ ಚಂದ್ರಶೇಖರ ಚನ್ನಬಸಪ್ಪ ಚೌಡಿಮನಿ ಮತ್ತು ಚನ್ನಬಸಪ್ಪ ಬಸಪ್ಪ ಸಲಿಕಿ ಅನ್ನುವರ ಮನೆಗಳು ಬಿದ್ದು ಎರಡ ಮೂರು ವರ್ಷ ಕಳೆದರು ಸೂಕ್ತ ಪರಿಹಾರ ದೊರಕಿಲ್ಲ, ಮನೆ ಕಳೆದುಕೊಂಡು ನೋವಿನಲ್ಲಿ ಇರುವ ಇವರಿಗೆ ಸಮಾಧಾನಕರ ಬಹುಮಾನ ಅನ್ನುವ ಹಾಗೇ 50,ಸಾವಿರ ಚೆಕ್ ನೀಡಿದ್ದಾರೆ. ಆದ್ರೇ ಅಧಿಕಾರಿಗಳು ಬಿದ್ದ ಮನೆಯ ಮೇಜರಮೇಟ್ ಮಾಡಿದ್ರೇ 3,ರಿಂದ 5,ಲಕ್ಷ ಪರಿಹಾರ ನೀಡಬೇಕಿತ್ತು. ಆದ್ರೆ ವಿಚಾರವನ್ನು ಮನೆ ಕಳೆದುಕೊಂಡವರು ಮತ್ತೆ ಅಧಿಕಾರಿಗಳ ಗಮನಕ್ಕೆ ತಂದ್ರು ಪ್ರಯೋಜ ಆಗ್ತಿಲ್ಲ. ಗ್ರಾಮಲೆಕ್ಕಧಿಕಾರಿಗಳಿಗೆ ಕೇಳಿದ್ರೆ, ಮೇಲಾಧಿಕಾರಿಗಳಿಗೆ ಮಾಹಿತಿ ನೀಡ್ತಿವೆ ಅಂತಾ ಜಾರಿಕೋಳ್ತಾರೆ. ಇನ್ನು ಕೆಲವು ಅಧಿಕಾರಿಗಳು ಮನೆ ಇಲ್ಲಾಂದ್ರೆ ನೀವು ಸಾಯಿತ್ತಿರಾ ಅನ್ನುವ ಶಬ್ದಗಳನ್ನು ಬಳಿಸುತ್ತಾರೆ ಎಂದು ಮನೆ ಕಳೆದುಕೊಂಡವರ ಆರೋಪಿಸುತ್ತಾರೆ. ಮನೆ ಕಳೆದುಕೊಂಡು ಹೊರಗೆ ಮಲಗುವ ಪರಿಸ್ಥಿತಿ ಇವರಿಗೆ ಇದ್ದರೆ, 50,ಸಾವಿರ ಲಂಚ್ ಕೋಡಿ ಅಂತಾ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಗ್ರಾಮ ಲೆಕ್ಕಾಧಿಕಾರಿ ಕೇಳ್ತಾರೆ ಅಂತೆ, ಇನ್ನಾದರೂ ಮೇಲಾಧಿಕಾರಿಗಳು ಇವರ ಬಗ್ಗೆ ಗಮನ ಹರಿಸಿ, ಸೂಕ್ತ ಪರಿಹಾರ ನೀಡಬೇಕು ಎಂಬುವುದು ನಮ್ಮ ಆಶಯವಾಗಿದೆ.