ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ IREO ಗ್ರೂಪ್ ಅಧ್ಯಕ್ಷ ಲಲಿತ್ ಗೋಯಲ್ ED ಅಧಿಕಾರಿಗಳಿಂದ ಅರೆಸ್ಟ್
ಹೊಸದಿಲ್ಲಿ: ರಿಯಲ್ ಎಸ್ಟೇಟ್ ಸಮೂಹ ಐಆರ್ ಇಒ ಅಧ್ಯಕ್ಷ ಲಲಿತ್ ಗೋಯಲ್ ( Real Estate Tycoon Lalit Goyal ) ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ( money laundering case ) ಜಾರಿ ನಿರ್ದೇಶನಾಲಯದ ( Enforcement Directorate ) ಅಧಿಕಾರಿಗಳು ಬಂಧಿಸಿದೆ.
ಕಳೆದ ವಾರ ರಿಯಾಲ್ಟರ್ ಅವರನ್ನು ದೇಶದಿಂದ ವಿಮಾನದಲ್ಲಿ ತೆರಳುವಾಗ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು. ಹಣಕಾಸು ಅಪರಾಧಗಳ ತನಿಖೆ ನಡೆಸುವ ಜಾರಿ ನಿರ್ದೇಶನಾಲಯವು ಗೋಯಲ್ ವಿರುದ್ಧ ಲುಕ್ ಔಟ್ ಸುತ್ತೋಲೆಯನ್ನು ಹೊರಹಾಕಿತ್ತು.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣದ ಬಗ್ಗೆ ಐಆರ್ ಇಒ 2010ರಿಂದ ತನಿಖೆಯಲ್ಲಿದೆ. ಈ ಪ್ರಕರಣದಲ್ಲಿ ಇದೀಗ ರಿಯಲ್ ಎಸ್ಟೇಟ್ ಸಮೂಹ ಐಆರ್ ಇ ಒ ಅಧ್ಯಕ್ಷ ಲಲಿತ್ ಗೋಯಲ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.