ಹಾಸನದಲ್ಲಿ ಮೀನು ಹಿಡಿಯಲು ಬಂದಿದ್ದವನ ಮೇಲೆ ಗುಂಡಿನ ದಾಳಿ ಪ್ರಕರಣ; ಆರೋಪಿಗಳು ಅರೆಸ್ಟ್‌

ಹಾಸನದಲ್ಲಿ ಮೀನು ಹಿಡಿಯಲು ಬಂದಿದ್ದವನ ಮೇಲೆ ಗುಂಡಿನ ದಾಳಿ ಪ್ರಕರಣ; ಆರೋಪಿಗಳು ಅರೆಸ್ಟ್‌

ಹಾಸನ: ಹಾಸನದಲ್ಲಿ ಮೀನು ಹಿಡಿಯಲು ಹೋಗಿದ್ದವನ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನಾಗರಾಜ್‌ ಮತ್ತು ಅನಿಲ್‌ ಬಂಧಿತ ಆರೋಪಿಗಳು . ಪೆಲ್ಲೆಟ್ ಗನ್‍ನಿಂದ ಗುಂಡಿನ ದಾಳಿ ಮಾಡಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ನವೆಂಬರ್‌ 30 ರಂದು ನವೀನ್‌ ಎಂಬಾತ ಅಕ್ರಮವಾಗಿ ಮರಳು ದಂಧೆ ನಡೆಸುತ್ತಿದ್ದ. ಈ ವಿಷಯ ತಿಳಿದ ಪೊಲೀಸರು ದಾಳಿ ನಡೆಸಿ ಟ್ರ್ಯಾಕ್ಟರ್‌ ಅನ್ನು ವಶಕ್ಕೆ ಪಡೆದಿದ್ದರು.

ಅದೇ ಗ್ರಾಮದ ನಾಗರಾಜ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಸಂಶಯಗೊಂಡು ನವೀನ್, ಪದೇ ಪದೇ ನಾಗರಾಜ್ ಜೊತೆ ಜಗಳವಾಡುತ್ತಿದ್ದನು. ಆದರೆ ನಾಗರಾಜ್ ವಿಶೇಷ ಚೇತನನಾಗಿದ್ದು ಇನ್ನೊಂದು ಕಾಲು ಮುರಿಯುತ್ತೇನೆ ಎಂದು ಧಮ್ಕಿ ಕೂಡ ಹಾಕುತ್ತಿದ್ದನು. ಇದರಿಂದ ಕೆರಳಿದ ನಾಗರಾಜ್ ನವೀನ್ ಮರ್ಡರ್ ಮಾಡಲು ಸ್ಕೆಚ್ ಹಾಕಿದ್ದ ಅನ್ನೋದು ತಿಳಿದು ಬಂದಿದೆ.
ಇನ್ನು ನಾಗರಾಜ್‌ ನವೀನ್‌ ಗೆ ಕರೆ ಮಾಡಿದ್ದಾನೆ. ಈ ವೇಳೆ ನವೀನ್‌ ಮೀನು ಹಿಡಿಯಲು ಬಂದಿದ್ದ, ಆಗಾ ಅಲ್ಲಿಗೆ ನಾಗರಾಜ್‌ ಮತ್ತು ಅನಿಲ್ ಕೂಡ ಬಂದಿದ್ದು, ನವೀನ್‌ ಗೆ ಗನ್‌ ನಿಂದ ಶೂಟ್‌ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.