ಮಿಷನ್ ಕಾಶ್ಮೀರ ಟು ಕನ್ಯಾಕುಮಾರಿ ಸೈಕ್ಲಿಂಗ್ ಜಾಥಾ ನಡೆಸುತ್ತಿರುವ ಸದಾನಂದ ಅಮರಾಪುರರಿಗೆ ಅದ್ದೂರಿ ಸ್ವಾಗತ

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್ ಮೂಲಕ ಆರ್‍ಡಿಪಿಆರ್ ಇಲಾಖೆ ಯೋಜನೆಗಳು ಹಾಗೂ ವ್ಯಸನಮುಕ್ತ ಭಾರತ ಸಂಕಲ್ಪದೊಂದಿಗೆ ಮಿಷನ್ ಕಾಶ್ಮೀರ ಟು ಕನ್ಯಾಕುಮಾರಿ ಸೈಕ್ಲಿಂಗ್ ಜಾಥಾವನ್ನು ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರು ಸದಾನಂದ ಅಮರಾಪುರ ಹಮ್ಮಿಕೊಂಡಿದ್ದಾರೆ. ಯುವಕರಿಗೆ ಸದಾ ಸ್ಪೂರ್ತಿ ತುಂಬುತ್ತಾ 3000 ಕಿಲೋಮೀಟರ್ ಗಿಂತ ಹೆಚ್ಚು ಸೈಕಲ್ ಮೂಲಕ ತೆರಳಿ ಜಾಗೃತಿ ಮೂಡಿಸುತ್ತಿರುವ ಇವರನ್ನು ಶಿಗ್ಗಾಂವಿ-ಸವಣೂರು ತಾಲೂಕಿನ ಎಲ್ಲ ಹಿರಿಯರು ಮತ್ತು ಅಧಿಕಾರಿಗಳು ಸನ್ಮಾನಿಸಿ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಹಿರಿಯ ಧುರೀಣರಾದ ಶಿವಾನಂದ ರಾಮಗೇರಿ, ಸಿಪಿಐ ಬಸವರಾಜ ಹಳಬಣ್ಣವರ, ಇ ಓ ಪ್ರಶಾಂತ್ ತುರಕಾಣಿ, ಸವಣೂರು ಬ್ಲಾಕ್ ಅಧ್ಯಕ್ಷರು ನಾಗಪ್ಪ ತಿಪ್ಪಕನವರ, ಮಂಜುನಾಥ್ ಮಣ್ಣಣವರ, ಹನುಮಂತಪ್ಪ ಬಂಡಿವಡ್ಡರ್, ಶಿವರಾಜ ಅಮರಾಪುರ, ಎಂ.ಜೆ ಮುಲ್ಲಾ, ಗೌಸ್ ಖಾನ್ ಮುನಸಿ, ಫಕ್ಕಿರೇಶ್ ಹವಳಪ್ಪನವರ್, ರವಿ ಕರಿಗಾರ್, ಶುಭಾಸ್ ಮಜ್ಜಿಗಿ, ಮಹಾಂತೇಶ್ ಸಾಲಿ ಮತ್ತು ಎಲ್ಲ ಹಿರಿಯ ನಾಗರಿಕರು ಉಪಸ್ಥಿತರಿದ್ದರು.