ಭಾರೀ ಮಳೆ ಕೊಚ್ಚಿಹೋಯ್ತು ಕಾಫಿ ತೋಟ
ಚಿಕ್ಕಮಗಳೂರು
ಕಳೆದ ರಾತ್ರಿ ಚಿಕ್ಕಮಗಳೂರು ಜಿಲ್ಲೆಯ ಕಳಸ, ಕುದುರೆಮುಖ ಸುತ್ತಮುತ್ತ ಭಾರೀ ಮಳೆಯಾಗಿದ್ದು, ಕಳಸ ತಾಲೂಕಿನ ಮುಳ್ಳೋಡಿ ಗ್ರಾಮದಲ್ಲಿ ಭಾರಿ ಮಳೆಗೆ ಮೂವರ ರೈತರ ಕಾಫಿ ತೋಟವೇ ಕೊಚ್ಚಿ ಹೋಗಿದೆ. ಒಂದು ಗಂಟೆ ಸುರಿದ ಮಳೆಗೆ ಒಂದೂವರೆ ಎಕರೆ ತೋಟ ಹಾಳಾಗಿದ್ದು, ಕಳೆದ ವರ್ಷವೂ ಮಳೆಯಿಂದ ತೋಟಗಳಿಗೆ ಹಾನಿಯಾಗಿತ್ತು. ಆದರೆ ಇನ್ನೂ ಈ ನಷ್ಟದ ಪರಿಹಾರ ಕೈ ಸೇರಿಲ್ಲ. ಪರಿಹಾರ ನೀಡದ ಸರ್ಕಾರದ ವಿರುದ್ಧ ರೈತರ ಆಕ್ರೋಶ ಹೊರಹಾಕಿದ್ದಾರೆ.