ಕೃಷಿ ಕಾಯ್ದೆ ಬೆಂಬಲಿಸಿ, ಧಾರವಾಡ ಹಿತರಕ್ಷಣಾ ವೇದಿಕೆ ಪ್ರತಿಭಟನೆ.

ಧಾರವಾಡ.

ಉತ್ತರ ಪ್ರದೇಶ ಲಖಿಂಪೂರ ಖೇರಾದಲ್ಲಿ ಕೃಷಿ ಕಾಯ್ದೆ, ವಿರೋಧಿಸಿ ನಡೆದ ಘಟನೆ ಖಂಡಿಸಿ, ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ಬೆಂಬಲಿಸಿ ಧಾರವಾಡದಲ್ಲಿ ಜಿಲ್ಲಾ ಹಿತರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಿದ್ರು. ನಗರದ ಜಿಲ್ಲಾಧಿಕಾರಿಯ ಕಛೇರಿ ಎದುರು ಧಾರವಾಡ ಹಿತರಕ್ಷಣಾ ವೇದಿಕೆಯ ನೇತ್ರತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ಪರ ಜೈಕಾರ ಹಾಕಿ, ಲಖಿಂಪೂರ ಖೇರಾದಲ್ಲಿ ಮೃತ 9, ಜನಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು. ಈ ಕಾಯ್ದೆಯಿಂದ ವಿಪಕ್ಷಗಳು ವಿಚಲಿತರಾಗಿ ದೇಶದ ರೈತರ ಹಾದಿ ತಪ್ಪಿಸುವಂತಹ ಕುತಂತ್ರಕ್ಕೆ ಮುಂದಾಗಿದ್ದಾರೆ. ಇನ್ನು ಈ ಕುತಂತ್ರದ ಒಂದು ಪುಟವಾಗಿ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ರೈತರ ಮುಖವಾಡ ಹಾಕಿಕೊಂಡು ವಿವಿಧ ಸಂಘಟನೆಗಳು ದೇಶದಲ್ಲಿ ಅಜಾಗೃಕತೆ, ಶಾಂತಿಯನ್ನು ಕದಡುವ ಕೆಲಸ ಮಾಡ್ತಿರುವುದು ದುರುದೃಷ್ಟಕರವಾಗಿದೆ. ಧಾರವಾಡ ಹಿತರಕ್ಷಣಾ ವೇದಿಕೆ ವತಿಯಿಂದ ಈ ಘಟನೆಯ ಬಗ್ಗೆ ಕುಲಂಕುಶವಾಗಿ ತನಿಖೆಯಾಗಬೇಕು,ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕಂದು, ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು.