ಕೊರ್ಟ್‌ ಅನುಮತಿ ಪಡೆದು ಧಾರವಾಡ ಗ್ರಾಮೀಣ ಕ್ಷೇತ್ರದಲ್ಲೇ ಸ್ಪರ್ಧೆ: ವಿನಯ್ ಕುಲಕರ್ಣಿ

ಕೊರ್ಟ್‌ ಅನುಮತಿ ಪಡೆದು ಧಾರವಾಡ ಗ್ರಾಮೀಣ ಕ್ಷೇತ್ರದಲ್ಲೇ ಸ್ಪರ್ಧೆ: ವಿನಯ್ ಕುಲಕರ್ಣಿ

ಧಾರವಾಡ, ; ನವೆಂಬರ್ 5 : ಬಿಜೆಪಿ ನನ್ನನ್ನು ಟಾರ್ಗೆಟ್ ಮಾಡಿದೆ. ಕಳೆದ 25 ವರ್ಷದ ರಾಜಕಾರಣದಲ್ಲಿ ಎಂದೂ ನಾನು ದ್ವೇಷದ ರಾಜಕೀಯ ಮಾಡಿಲ್ಲ. ಸದ್ಯ ನನಗೆ ಕ್ಷೇತ್ರ ಪ್ರವೇಶಕ್ಕೆ ನಿಷೇಧವಿದೆ. ವಿಧಾನಸಭೆ ಚುನಾವಣೆಯೊಳಗೆ ಕ್ಷೇತ್ರ ಪ್ರವೇಶಕ್ಕೆ ಕೋರ್ಟ್ ಆದೇಶ ನೀಡುವ ಭರವಸೆ ಇದೆ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ವಿಶ್ವಾಸ ವ್ಯಕ್ತಪಡಿಸಿದರು.

ಮುಂಬರುವ ಚುನಾವಣೆಗೆ ಶಿಗ್ಗಾವಿ, ಕಿತ್ತೂರು ಸೇರಿದಂತೆ ಬೇರೆ ಕ್ಷೇತ್ರಗಳಿಂದ ಸ್ಪರ್ಧಿಸಲು ಆಹ್ವಾನ ಬಂದಿದೆ. ಆದರೆ ಧಾರವಾಡ ಗ್ರಾಮೀಣ ಕ್ಷೇತ್ರದಿಂದಲೇ ನಾನು ಸ್ಪರ್ಧಿಸುವೆ. ಕ್ಷೇತ್ರ ಬಿಡುವ ಪ್ರಶ್ನೆಯೇ ಇಲ್ಲ. ನ್ಯಾಯಾಲಯದ ಅನುಮತಿ ಪಡೆದು ಧಾರವಾಡ ಗ್ರಾಮೀಣದಿಂದಲೇ ಸ್ಪರ್ಧಿಸುವೆ ಎಂದರು.

ಹಣ ಗಳಿಕೆ ಆಸೆ ನನಗಿಲ್ಲ. ಬಡವರು, ದೀನ-ದಲಿತರ ಸೇವೆಯೇ ನನ್ನ ಧ್ಯೇಯ. ನಾನು ಅನ್ಯಾಯ ಸಹಿಸಲ್ಲ. . ನನ್ನೂರಿನ ಜನರ ಸೇವೆಗೆ ನಾನು ಕೆಲಸ ಮಾಡುವ ಹಂಬಲವಿದೆ, ಧಾರವಾಡ ಗ್ರಾಮೀಣದಿಂದ ಈಗಾಗಲೇ 10 ಜನ ಆಕಾಂಕ್ಷಿಗಳಿದ್ದು, ಟಿಕೆಟ್ ನೀಡಿಕೆ ಹೈಕಮಾಂಡ್ ತೀರ್ಮಾನವೇ ಅಂತಿಮ. ನಾನು ರಾಜ್ಯಮಟ್ಟದ ನಾಯಕ ಎನ್ನುವುದನ್ನು ಒಪ್ಪುವೆ. ಹಾಗಾಗಿ ಅನ್ಯ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಬಿಜೆಪಿಗರಿಗೆ ನನ್ನ ಬಗ್ಗೆ ಅಪ್ರಚಾರ ಮಾಡಲು ಬೇರೆ ವಿಷಯಗಳಿಲ್ಲ. ಹೀಗಾಗಿ ಹಳೆಯ ವಿಷಯಗಳನ್ನೇ ಪುನಃ ಕೆದಕುತ್ತಿದ್ದಾರೆ ಎಂದು ದೂರಿದರು.