BIG BREAKING NEWS ಬೆಚ್ಚಿ ಬಿದ್ದ ಮೈಸೂರಿನ ಜನರು : ಸ್ನೇಹಿತನ ಜೊತೆ ತೆರಳಿದ್ದ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

BIG BREAKING NEWS ಬೆಚ್ಚಿ ಬಿದ್ದ ಮೈಸೂರಿನ ಜನರು : ಸ್ನೇಹಿತನ ಜೊತೆ ತೆರಳಿದ್ದ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಉತ್ತರ ಪ್ರದೇಶದಲ್ಲಿ ನಡೆದಿದ್ದಂತ ನಿರ್ಬಯ ಅತ್ಯಾಚಾರ ಪ್ರಕರಣದಂತೆ, ಸ್ನೇಹಿತರನ ಜೊತೆಗೆ ತೆರಳಿದ್ದಂತ ವಿದ್ಯಾರ್ಥಿನಿಯ ಮೇಲೆ ನಾಲ್ಕರಿಂದ ಐವರು ದುಷ್ಕರ್ಮಿಗಳು ಅತ್ಯಾಚಾರ ಎಸಗಿರೋ ಪ್ರಕರಣ ನಡೆದಿದೆ.

ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಬಳಿಯ ಲಲಿತಾದ್ರಿಪುರ ಹೊರವಲಯಕ್ಕೆ ಸ್ನೇಹಿತನ ಜೊತೆಗೆ ವಿದ್ಯಾರ್ಥಿನಿಯೊಬ್ಬಳು ತೆರಳಿದ್ದಳು. ಈ ವೇಳೆ ಪಾನಮತ್ತರಾಗಿದ್ದಂತ ನಾಲ್ಕರಿಂದ ಐವರು ಕಿಡಿಗೇಡಿಗಳು, ಸ್ನೇಹಿತನ್ನು ಥಳಿಸಿದ್ದಲ್ಲದೇ, ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರೋದಾಗಿ ತಿಳಿದು ಬಂದಿದೆ.

ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಡಿಸಿಪಿ ಪ್ರದೀಪ್ ಗುಂಟಿ, ಎಸಿಪಿ ಶಶಿಧರ್, ಇನ್ಸ್ ಪೆಕ್ಟರ್ ರವಿಕರ್ ಸರಿದಂತೆ ವಿವಿಧ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಈ ಸಂಬಂಧ ತನಿಖೆ ಕೈಗೊಂಡಿದ್ದು, ಅತ್ಯಾಚಾರ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.