ಅಂಡರ್‌ವರ್ಲ್ಡ್ ಕತೆ ಕಬ್ಜ ಸೂಪರ್ ಹಿಟ್ ಆಗಲು ಈ 5 ಅಂಶಗಳೇ ಕಾರಣ!
ಆನಂದ್ ಪಂಡಿತ್ ಅವರ ಅಂಡರ್‌ವರ್ಲ್ಡ್ ಕಹಾನಿ ಕಬ್ಜ ಸಿನಿಮಾ ಸಂಪೂರ್ಣ ಹೊಸ ಮಟ್ಟಕ್ಕೆ ಜನಸಾಮಾನ್ಯರನ್ನು ಆಕರ್ಷಿಸಿದೆ. ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಜನರ ಮನಗೆಲ್ಲುತ್ತಿದೆ. ಚಿತ್ರದಲ್ಲಿ ಉಪೇಂದ್ರ, ಕಿಚ್ಚ ಸುದೀಪ, ಶಿವ ರಾಜ್‌ಕುಮಾರ್, ಶ್ರಿಯಾ ಶರಣ್ ಮುಂತಾದ ಸೂಪರ್‌ಸ್ಟಾರ್‌ಗಳು ನಟಿಸಿದ್ದಾರೆ.
ಕಬ್ಜ ಸಿನಿಮಾ ವಿಶ್ವಾದ್ಯಂತ ಸುಮಾರು 4 ಸಾವಿರ ಸ್ಕ್ರೀನ್‌ಗಳಲ್ಲಿ ತೆರೆಕಂಡಿದೆ. ಕಬ್ಜ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಹುಟ್ಟು ಹಾಕಿದೆ. ಕರ್ನಾಟಕದಲ್ಲಿಯೇ ನಾನೂರು ಸ್ಕ್ರೀನ್ ಗಳಲ್ಲಿ ಕಬ್ಜ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಉಪ್ಪಿ ನಟನೆ, ಕಿಚ್ಚನ ಖಾಕಿ ಖದರ್, ಶಿವರಾಜ್‌ಕುಮಾರ್ ಎಂಟ್ರಿ ಹಾಗೂ ಶ್ರಿಯಾ ಅಂದ ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತಿದೆ. ಕನ್ನಡ ಚಿತ್ರರಂಗದ ಮೂರು ದಿಗ್ಗಜರು ನಟಿಸಿರುವ ಸಿನಿಮಾ ಕಬ್ಜದಲ್ಲಿ ಸಾಕಷ್ಟು ಟ್ವಿಸ್ಟ್ ಮತ್ತು ಟರ್ನ್ ಗಳು ಸಿನಿಮಾದಲ್ಲಿದೆ. 1960-70 ರ ಕಾಲಘಟ್ಟದ ಕತೆ ಹೇಳುವ ಈ ಸಿನಿಮಾ ಸೂಪರ್ ಹಿಟ್ ಆಗಲು ಈ 5 ಅಂಶಗಳೇ ಕಾರಣ.
ಆನಂದ್ ಪಂಡಿತ್ ಅವರ ಮೊದಲ ಸೌತ್ ಸಿನಿಮಾ :
ಹಲವು ವರ್ಷಗಳಿಂದ ನಿರ್ಮಾಪಕ ಆನಂದ್ ಪಂಡಿತ್ ಅವರು ಅತ್ಯಂತ ಮೋಡಿಮಾಡುವ ಸ್ಕ್ರಿಪ್ಟ್‌ಗಳನ್ನು ಆಯ್ಕೆಮಾಡಲು ಮತ್ತು ತಮ್ಮ ವಿಷಯದ ಆಯ್ಕೆಯ ಮೂಲಕ ಜನರನ್ನು ರಂಜಿಸಲು ಹೆಸರುವಾಸಿಯಾಗಿದ್ದಾರೆ. ಕಬ್ಜಾ ನಿರ್ಮಾಪಕ ಆನಂದ್ ಪಂಡಿತ್ ಅವರ ಮೊದಲ ಸೌತ್ ಪ್ರಾಜೆಕ್ಟ್ ಆಗಿದೆ. ಅಲ್ಲದೇ ಇದೊಂದು ಬಿಗ್ ಬಜೆಟ್ ಸಿನಿಮಾ ಆಗಿದೆ.
ಸುದೀಪ, ಉಪೇಂದ್ರ, ಶಿವಣ್ಣ ಒಟ್ಟಿಗೆ ನಟಿಸಿದ ಮೊದಲ ಚಿತ್ರ :
ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ, ಉಪೇಂದ್ರ ಮತ್ತು ಶಿವ ರಾಜ್‌ಕುಮಾರ್ ಬೆಳ್ಳಿತೆರೆಯಲ್ಲಿ ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸಿದ್ದಾರೆ. ಮೂವರಿಗೂ ದೊಡ್ಡ ಫ್ಯಾನ್ ಬೇಸ್ ಇದ್ದು ಇದೂ ಕೂಡ ಚಿತ್ರದ ಯಶಸ್ಸಿಗೆ ಬಹುದೊಡ್ಡ ಕಾರಣವಾಗಿದೆ. ಈ ಸಹಯೋಗವು ಈಗಾಗಲೇ ಲಕ್ಷಾಂತರ ಅಭಿಮಾನಿಗಳ ಮನಗೆದ್ದಿದೆ.
ಭಾವನಾತ್ಮಕ ಅಂಶಗಳ ಜೊತೆ ಹೈ-ಆಕ್ಟೇನ್ ಆಕ್ಷನ್ ಸೀಕ್ವೆನ್ಸ್ :
ಕಬ್ಜ ಸಿನಿಮಾದ ಟ್ರೇಲರ್ ಹೈ-ಆಕ್ಟೇನ್ ಆಕ್ಷನ್ ಸೀಕ್ವೆನ್ಸ್ ಹೊಂದಿದೆ. ಆದರೆ ಆಕ್ಷನ್‌ನ ಹೊರತಾಗಿ ಚಿತ್ರವು ತುಂಬಾ ಬಲವಾದ ಭಾವನಾತ್ಮಕ ನಿರೂಪಣೆಯನ್ನು ಒಳಗೊಂಡಿದೆ. ಅದು ನಿಮ್ಮನ್ನು ಚಿತ್ರದ ಕೊನೆಯವರೆಗೂ ಹಿಡಿದಿಟ್ಟುಕೊಳ್ಳುತ್ತದೆ.
ರವಿ ಬಸ್ರೂರ್ ಸಂಗೀತ :
ಕಬ್ಜ ಭಾರತೀಯ ಚಿತ್ರರಂಗದಲ್ಲಿ ಮುಂದಿನ ದೊಡ್ಡ ಹಿಟ್ ಸಿನಿಮಾ ಆಗುವ ಎಲ್ಲ ನಿರೀಕ್ಷೆಗಳಿವೆ. ಇದಕ್ಕೆ ಒಂದು ಪ್ರಮುಖ ಕಾರಣವೆಂದರೆ ಅದರ K.G.F ಗೆ ಹೋಲಿಕೆಯಾಗಿದೆ. K.G.F ನಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ ಲಕ್ಕಿ ಲಕ್ಷ್ಮಣ್ ಮತ್ತು ಜಾನ್ ಕೊಕ್ಕೆನ್ ಆನಂದ್ ಪಂಡಿತ್ ಅವರ ಕಬ್ಜದ ಭಾಗವಾಗಿದ್ದಾರೆ. ಅವರಲ್ಲದೆ ಸಾಹಸ ನೃತ್ಯ ನಿರ್ದೇಶಕ-ವಿಕ್ರಮ್ ಮೋರ್, ಹಾಗೆಯೇ K.G.F ನ ಸಂಗೀತ ನಿರ್ದೇಶಕ-ರವಿ ಬಸ್ರೂರ್ ಸಹ ಕಬ್ಜದ ಭಾಗವಾಗಿದ್ದಾರೆ.
ಬ್ರಿಟಿಷರ ಕಾಲದ ಸಾಹಸಗಾಥೆ :
ಬ್ರಿಟಿಷರ ಕಾಲದ ಅಂಡರ್‌ವಲ್ಡ್ ಕತೆಯನ್ನು ಕಬ್ಜ ಪ್ರೇಕ್ಷಕರಿಗೆ ನೀಡುತ್ತದೆ. ಸಾಮಾನ್ಯವಾಗಿ ಅಂಡರ್‌ವಲ್ಡ್ ಸಿನಿಮಾಗಳು ಹಿಟ್ ಆಗುವ ಚಾನ್ಸ್ ಹೆಚ್ಚಾಗಿರುತ್ತದೆ. ಇದು ಕೂಡ ಕಬ್ಜಾ ಸಿನಿಮಾ ಸಕ್ಸಸ್‌ಗೆ ಒಂದು ಕಾರಣವಾಗಿದೆ.