ಕಿರುತೆರೆ ವೇದಿಕೆಯಲ್ಲಿ ವಿಕ್ರಾಂತ್ ರೋಣ ರಿಲೀಸ್ ಡೇಟ್ ಬಹಿರಂಗಪಡಿಸಿದ ಕಿಚ್ಚ ಸುದೀಪ್
ಜನವರಿಯಲ್ಲಿ ಸಿನಿಮಾ ಬಿಡುಗಡೆಯಾಗಬಹುದು ಎಂದು ಸುದೀಪ್ ಹೇಳಿದ್ದಾರೆ. ಜನವರಿ ಕಿಚ್ಚನ ಪಾಲಿಗೆ ವಿಶೇಷ ತಿಂಗಳು. ಇದೇ ತಿಂಗಳು ಕಿಚ್ಚನ ಸಿನಿ ಜೀವನ ಆರಂಭವಾದ ತಿಂಗಳು. ಕಳೆದ ವರ್ಷ ಇದೇ ತಿಂಗಳು ದುಬೈನ ಬುರ್ಜ್ ಖಲೀಫಾದಲ್ಲಿ ವಿಕ್ರಾಂತ್ ರೋಣ ಟೀಸರ್ ಬಿಡುಗಡೆಯಾಗಿತ್ತು. ಈ ವರ್ಷ ಇದೇ ತಿಂಗಳು ಸಿನಿಮಾ ಬಿಡುಗಡೆಯಾಗಲಿದೆ.