ದೆಹಲಿಯಲ್ಲಿ ಕೊಂಚ ಸುಧಾರಣೆ ಕಂಡ ವಾಯು ಮಾಲಿನ್ಯದ ತೀವ್ರತೆ

ದೆಹಲಿಯಲ್ಲಿ ಕೊಂಚ ಸುಧಾರಣೆ ಕಂಡ ವಾಯು ಮಾಲಿನ್ಯದ ತೀವ್ರತೆ

 ದೀಪಾವಳಿ ಹಬ್ಬದ ಪ್ರಯುಕ್ತ ದೆಹಲಿಯ ಗಾಳಿಯ ಗುಣಮಟ್ಟ ತೀವ್ರಗೊಂಡಿದೆ ಎಂದು System of Air Quality and Weather Forecasting And Research (SAFAR) ತಿಳಿಸಿದೆ. SAFAR ಒದಗಿಸಿದ ಮಾಹಿತಿಯ ಪ್ರಕಾರ, ದೆಹಲಿಯ ಗಾಳಿಯ ಗುಣಮಟ್ಟ 'ತೀವ್ರ' ವಿಭಾಗದಲ್ಲಿ ಉಳಿದುಕೊಂಡಿದೆ.

ಭಾನುವಾರ ಬೆಳಿಗ್ಗೆ ಗಾಳಿಯ ಗುಣಮಟ್ಟ ಸೂಚ್ಯಂಕ (AQI) 436 ರಲ್ಲಿ ನೋಂದಾಯಿಸಲ್ಪಟ್ಟಿದೆ. ಭಾನುವಾರದಂದು ಗಾಳಿಯ ಗುಣಮಟ್ಟ ಸ್ವಲ್ಪಮಟ್ಟಿಗೆ ಸುಧಾರಿಸಿದೆ, ಆದರೆ ಇನ್ನೂ 'ತೀವ್ರ' ವಿಭಾಗದಲ್ಲಿದೆ.

ನವೆಂಬರ 4 ಬೆಳಿಗ್ಗೆ 8 ಗಂಟೆಗೆ, ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 341 ರಷ್ಟಿತ್ತು, ಬುಧವಾರ ಸಂಜೆ 4 ಗಂಟೆಗೆ 314 ರಷ್ಟು ದಾಖಲಾಗಿದೆ. 24-ಗಂಟೆಗಳ ಸರಾಸರಿ AQI ಮಂಗಳವಾರ 303 ಮತ್ತು ಸೋಮವಾರ 281 ಆಗಿತ್ತು. ದೀಪಾವಳಿಯ ನಂತರ ಶುಕ್ರವಾರದಂದು ನಗರದ ಗಾಳಿಯ ಗುಣಮಟ್ಟ 'ಅಪಾಯಕಾರಿ' ವರ್ಗಕ್ಕೆ ತಿರುಗಿತ್ತು. ಆನಂದ್ ವಿಹಾರ್ ಮತ್ತು ಫರಿದಾಬಾದ್‌ನಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 600 ಕ್ಕಿಂತ ಹೆಚ್ಚು ದಾಖಲಾಗುವುದರೊಂದಿಗೆ ಶನಿವಾರವೂ ನಗರದ ಹಲವಾರು ಭಾಗಗಳಲ್ಲಿ ಗಾಳಿಯ ಗುಣಮಟ್ಟ 'ಅಪಾಯಕಾರಿ' ವಿಭಾಗದಲ್ಲಿ ಉಳಿದಿದೆ.

ಗಾಳಿಯ ಗುಣಮಟ್ಟವನ್ನು ಈ ರೀತಿ ಪರಿಗಣಿಸಲಾಗುತ್ತದೆ- ಸೊನ್ನೆ ಮತ್ತು 50 ರ ನಡುವಿನ (AQI) ಸೂಚ್ಯಂಕವನ್ನು 'ಉತ್ತಮ' ಎಂದು ಪರಿಗಣಿಸಲಾಗುತ್ತದೆ, 51 ಮತ್ತು 100 ನಡುವಿನ (AQI) ಸೂಚ್ಯಂಕವನ್ನು 'ತೃಪ್ತಿಕರ' ಎನ್ನಲಾದರೆ, 101 ಮತ್ತು 200 ನಡುವಿನ (AQI) ಸೂಚ್ಯಂಕವನ್ನು 'ಮಧ್ಯಮ' ಎಂದು ಪರಿಗಣಿಸಲಾಗುತ್ತದೆ. ಇನ್ನೂ 201 ಮತ್ತು 300 'ಕಳಪೆ' ಹಾಗೂ 301 ಮತ್ತು 400 ನಡುವಿನ (AQI) ಸೂಚ್ಯಂಕವನ್ನು 'ಅತ್ಯಂತ ಕಳಪೆ' ಮತ್ತು 401- 500 ನಡುವಿನ (AQI) ಸೂಚ್ಯಂಕವನ್ನು 'ತೀವ್ರ' ಎಂದು ಪರಿಗಣಿಸಲಾಗುತ್ತದೆ.

ದೆಹಲಿಯಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟ ಪಟಾಕಿ ಸಿಡಿಸುವಿಕೆ ಮತ್ತು ನೆರೆಯ ರಾಜ್ಯಗಳಲ್ಲಿ ಕಳೆ ಸುಡುವಿಕೆಯಿಂದ ಹೆಚ್ಚಾಗುತ್ತಿದೆ. ಮುಂದಿನ ಕೆಲವು ದಿನಗಳಲ್ಲಿ ಸುಧಾರಿಸುವ ಸಾಧ್ಯತೆ ಬಹುತೇಕ ಕಡಿಮೆ ಎನ್ನಲಾಗುತ್ತಿದೆ. ವಾಯುವ್ಯ ಮಾರುತಗಳು ಪಂಜಾಬ್ ಮತ್ತು ಹರಿಯಾಣದಲ್ಲಿ ಕೃಷಿ ಬೆಂಕಿಯಿಂದ ಹೊಗೆಯನ್ನು ರಾಷ್ಟ್ರ ರಾಜಧಾನಿಯ ಕಡೆಗೆ ಸಾಗಿಸುತ್ತವೆ. ಕಳೆದ ವರ್ಷ, ನವೆಂಬರ್ 5 ರಂದು ದೆಹಲಿಯ ಮಾಲಿನ್ಯದಲ್ಲಿ ಕಳೆ ಸುಡುವಿಕೆಯ ಪಾಲು 42 ಪ್ರತಿಶತದಷ್ಟಿತ್ತು. 2019 ರಲ್ಲಿ, ನವೆಂಬರ್ 1 ರಂದು ದೆಹಲಿಯ PM2.5 ಮಾಲಿನ್ಯದ 44 ಪ್ರತಿಶತದಷ್ಟು ಬೆಳೆ ಅವಶೇಷಗಳನ್ನು ಸುಡುವುದಾಗಿತ್ತು. ದೆಹಲಿಯ PM2.5 ಸಾಂದ್ರತೆಯಲ್ಲಿನ ಕಳೆ ಸುಡುವಿಕೆಯ ಕೊಡುಗೆಯು 2019 ರಲ್ಲಿ 19 ಪ್ರತಿಶತಕ್ಕೆ ಹೋಲಿಸಿದರೆ ಕಳೆದ ವರ್ಷ ದೀಪಾವಳಿ ದಿನದಂದು 32 ಪ್ರತಿಶತದಷ್ಟಿತ್ತು. ಅಕ್ಟೋಬರ್‌ನಲ್ಲಿ ದಾಖಲೆಯ ಮಳೆ ಮತ್ತು ಕಳೆ ಸುಡುವಿಕೆ, ಗಾಳಿಯ ದಿಕ್ಕಿನಿಂದಾಗಿ ದೆಹಲಿಯ ವಾಯುಮಾಲಿನ್ಯದಲ್ಲಿ ಕೃಷಿ ಬೆಂಕಿಯಿಂದಾಗುವ ಹೊಗೆಯ ಕೊಡುಗೆ ಕಡಿಮೆಯಾಗಿದೆ.

ನೆರೆಯ ರಾಜ್ಯಗಳಾದ ಪಂಜಾಬ್ ಮತ್ತು ಹರಿಯಾಣದಲ್ಲಿ ಕಳೆ ಸುಡುವ ವರದಿಗಳ ನಡುವೆ, ಮುಂದಿನ ವಾರದವರೆಗೆ ಪರಿಸ್ಥಿತಿ ಸುಧಾರಿಸುವ ಸಾಧ್ಯತೆಯಿಲ್ಲ. ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (NASA) ದ ಉಪಗ್ರಹದ ಮಾಹಿತಿಯ ಪ್ರಕಾರ ಪಂಜಾಬ್ ಒಂದರಲ್ಲೇ 3,500 ಕ್ಕೂ ಹೆಚ್ಚು ಸ್ಟಬಲ್ ಬರ್ನಿಂಗ್ ಸ್ಪಾಟ್‌ಗಳನ್ನು ಹೊಂದಿದೆ. ಕೃಷಿ ಪ್ರಧಾನ ರಾಜ್ಯಗಳಾದ ಪಂಜಾಬ್ ಮತ್ತು ಹರಿಯಾಣದಲ್ಲಿ ಗರಿಷ್ಠ ಕೊಯ್ಲಿನ ಅವಧಿಯು ಪ್ರಾರಂಭವಾಗಲಿರುವುದರಿಂದ ಈ ತಾಣಗಳಲ್ಲಿ ವಾಯುಮಾಲಿನ್ಯ ತಕ್ಷಣವೇ ಕಡಿಮೆಯಾಗುವ ಸಾಧ್ಯತೆಯಿಲ್ಲ. ಆದ್ದರಿಂದ, ಹವಾಮಾನ ಪರಿಸ್ಥಿತಿಗಳು ಮತ್ತೊಮ್ಮೆ ಪ್ರತಿಕೂಲವಾಗಿದ್ದರೆ ಸಮಸ್ಯೆಯು ಉಲ್ಬಣಗೊಳ್ಳಬಹುದು