100 ನೇ ದಿನಕ್ಕೆ 'ಭಾರತ್ ಜೋಡೋ ಯಾತ್ರೆ'

ದೌಸಾ(ರಾಜಸ್ಥಾನ): ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ 100 ನೇ ದಿನಕ್ಕೆ ಕಾಲಿಟ್ಟಿದೆ. ಕಾಂಗ್ರೆಸ್ ಪಕ್ಷದ ಸಾಮೂಹಿಕ ಸಂಪರ್ಕ ಅಭಿಯಾನ ಇಂದು ರಾಜಸ್ಥಾನದ ದೌಸಾದಿಂದ ಪುನರಾರಂಭಗೊಂಡಿದೆ. ವೈನಾಡ್ ಸಂಸದ ರಾಹುಲ್ ಗಾಂಧಿ ಅವರು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಬೆಳಿಗ್ಗೆ 6 ಗಂಟೆ ಸುಮಾರಿಗೆ ದೌಸಾದ ಮೀನಾ ಹೈಕೋರ್ಟ್‌ನಿಂದ ಪಾದಯಾತ್ರೆಯನ್ನು ಪುನರಾರಂಭಿಸಿದರು.