ಮಧ್ಯಪ್ರದೇಶದ ಯುವತಿಯಿಂದ ಸೈಕಲ್‌ನಲ್ಲಿಯೇ ದೇಶ ಪರ್ಯಟನೆ

ಮಧ್ಯಪ್ರದೇಶದ ಯುವತಿಯಿಂದ ಸೈಕಲ್‌ನಲ್ಲಿಯೇ ದೇಶ ಪರ್ಯಟನೆ

ಕಾರವಾರ: ಭಾರತದಲ್ಲಿಯೂ ಹೆಣ್ಣುಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು ಜಗತ್ತಿಗೆ ಸಾರುವ ನಿಟ್ಟಿನಲ್ಲಿ ಯುವತಿಯೋರ್ವಳು ಏಕಾಂಗಿಯಾಗಿ ಸೈಕಲ್‌ ಮೂಲಕ ದೇಶ ಸುತ್ತುತ್ತಿದ್ದು, ಎಲ್ಲರ ಗಮನ ಸೆಳೆದಿದ್ದಾಳೆ. ಮಧ್ಯಪ್ರದೇಶದ ರಾಜಘಡ ಜಿಲ್ಲೆಯ ಆಶಾ ಮಾಲ್ವಿ, ನ.1ರಂದು ಸೈಕಲ್‌‌ ಯಾತ್ರೆ ಮೂಲಕ ದೇಶ ಸುತ್ತಲು ಹೊರಟಿದ್ದಳು. ಈಕೆ ಬರೋಬ್ಬರಿ 20 ಸಾವಿರ ಕಿ.ಮೀ.ದೂರ ಕ್ರಮಿಸುವ ಗುರಿ ಹೊಂದಿದ್ದಾರೆ. ಈಗಾಗಲೇ ಈಕೆ ಸುಮಾರು 3,700 ಕಿ.ಮೀ. ಸೈಕಲ್‌ ತುಳಿದು ಕಾರವಾರ ತಲುಪಿದ್ದಾರೆ.