ಹೀಗಿವೆ ಇಂದು 'ಸಿಎಂ ಬೊಮ್ಮಾಯಿ' ನೇತೃತ್ವದಲ್ಲಿ ನಡೆದ 'ಸಚಿವ ಸಂಪುಟ ಸಭೆ'ಯ ಹೈಲೈಟ್ಸ್
ಬೆಂಗಳೂರು: ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ( SC, ST Reservation Hike ) ಸಂಬಂಧ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು ಸೇರಿದಂತೆ ಹಲವು ನಿರ್ಣಯಗಳಿಗೆ ಅಂಗೀಕಾರ ದೊರೆತಿದೆ.
ಇಂದಿನ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದಂತ ಸಚಿವ ಸಂಪುಟ ಸಭೆಯ ಬಳಿಕ, ಸಚಿವ ಮಾಧುಸ್ವಾಮಿ ಸುದ್ದಿಗೋಷ್ಠಿ ನಡೆಸಿ ಸಂಪುಟ ಸಭೆಯ ನಿರ್ಣಯಗಳ ಬಗ್ಗೆ ಮಾಹಿತಿ ನೀಡಿದರು. ಬಳ್ಳಾರಿ ಜಿಲ್ಲೆಯ ಹಗರಿಯಲ್ಲಿ ನೂತನ ಕೃಷಿ ಸಂಶೋಧನಾ ಕಾಲೇಜು ಸ್ಥಾಪನೆ ಮಾಡಲಾಗುತ್ತದೆ. ರಾಜ್ಯಕ್ಕೆ ಅನ್ವಯಿಸುವಂತೆ ಹೆಚ್ಚು ರೆಜ್ಯುಲೆಷನ್ ಉಪಗ್ರಹ ದತ್ತಾಂಶ ಖರೀದಿಗೆ 18 ಕೋಟಿ ಅನುಮೋದನೆ ಕೊಡುತ್ತಿದ್ದೇವೆ. ಕರ್ನಾಟಕ ನವೀಕರಣ ಮಾಡಬಹುದಾದ ಇಂಧನ ನೀತಿ 2022 ರಿಂದ 27ಕ್ಕೆ ತಿದ್ದುಪಡಿ ಮಾಡಿದ್ದೇವೆ ಎಂದರು.
ದಾವಣಗೆರೆ ಹೊನ್ನಾಳಿಯಲ್ಲಿ 100 ರಿಂದ200 ಬೆಡ್ ಆಸ್ಪತ್ರೆಗೆ 23 ಕೋಟಿ ರೂಪಾಯಿ ಅನುಮೋದನೆ ನೀಡಲಾಗಿದೆ. ಗೋವಿಂದರಾಜ ನಗರ ಕ್ಷೇತ್ರದ ಹೈಟೇಕ್ ಆಸ್ಪತ್ರೆಗೆ 24 ಕೋಟಿ ಬಿಡುಗಡೆ ಮಾಡಲಾಗುತ್ತದೆ. ಚಿಕ್ಕಬಳ್ಳಾಪುರ ಹಾಗೂ ನೆಲಮಂಗಲ ರೋಡ್ ನವೀಕರಣಕ್ಕೆ 8 ಕೋಟಿ ಇದ್ದ 10 ಕೋಟಿ 13 ಲಕ್ಷ ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದೆ ಎಂದರು.
ಸೊರಬ ತಾಲ್ಲೂಕಿನಲ್ಲಿ ಇಡೀ ಸರ್ಕಾರಿ ಕಚೇರಿಗಳನ್ನ ಒಂದೇ ಕಡೆ ಪ್ರಾರಾಂಭಿಸಲು 49.60 ಕೋಟಿ ಬಿಡುಗಡೆಗೆ ಒಪ್ಪಿಗೆ ಸೂಚಿಸಲಾಗಿದೆ. ವಿಜಯಪುರ ಜಿಲ್ಲೆಯಸಿದ್ದಾರೂಡ ಮಠಕ್ಕೆ 5 ಎಕರೆ ಜಮೀನು ಮಂಜೂರು. ನಿರ್ಮಾಲಾ ಚಾರಿಟಬಲ್ ಟ್ರಸ್ಟ್ ಗೆ ಎರಡು ಎಕರೆ ಜಮೀನು ಮಂಜೂರು. ಹಿರೇಕೆರೂರಿನ ಹಬಲೂರು ಮಾಸುರುಗಳಲ್ಲಿ ಸರ್ವಜ್ಞ ಭವನ ಸೇರಿದಂತೆ ಮೂಲ ಸೌಕರ್ಯ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ. ಚಾಮರಾಜನಗರ ತಾಲ್ಲೂಕಿನ 166 ಗ್ರಾಮಗಳಿಗೆ ಜಲಜೀವನ್ ಮಿಷನ್ ಅಡಿ 26 ಕೋಟಿ ಅನುದಾನ, ಕೇಂದ್ರದಿಂದ 11.50 ಕೋಟಿ ರಾಜ್ಯದಿಂದ 14.50 ಕೋಟಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದರು.