ದ್ರಾಕ್ಷಿ ಸಂಪೂರ್ಣ ಹಾಳು, ಅನ್ನದಾತ ಕಂಗಾಲು
ಅಕಾಲಿಕ ಮಳೆಗೆ ಅನ್ನದಾತರು ಕಂಗಾಲಾಗಿದ್ದು, ಕೊಪ್ಪಳ ತಾಲೂಕಿನ ಗುತ್ತೂರ ಗ್ರಾಮದ ರೈತ ಯಂಕಣ್ಣ ಅವರ 9 ಎಕರೆಯಲ್ಲಿ ಬೆಳೆದ ದ್ರಾಕ್ಷಿ ಸಂಪೂರ್ಣ ಹಾಳಾಗಿದೆ. ದ್ರಾಕ್ಷಿಯು ಕಾಯಿ ಕಟ್ಟೋ ಹಂತದಲ್ಲಿದ್ದು, ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾನೆ. ಜಿಲ್ಲೆಯಲ್ಲಿ ಒಟ್ಟು 1200 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗಿದೆ.