ರಾಜ್ಯ BJPಯಲ್ಲಿ ಎದೆಬಡಿತ ಹೆಚ್ಚಿಸಿದ ಮೋದಿ-ಬಿಎಸ್ವೈ ಸ್ಪೆಷಲ್ ಮೀಟಿಂಗ್..ಯಾಕೆ ಗೊತ್ತಾ

ಚುನಾವಣೆ ಘೋಷಣೆ ಹೊತ್ತಲ್ಲೇ ಈ ಬೆಳವಣಿಗೆ ಸಂಚಲನ ಸೃಷ್ಟಿಸಿದೆ. ಬಿಎಸ್ವೈ ಕರೆದ ಮೋದಿ 15 ನಿಮಿಷಗಳ ಕಾಲ ಒನ್ ಟು ಒನ್ ಮೀಟಿಂಗ್ ನಡೆಸಿದ್ದಾರೆ. ಬಿಜೆಪಿಯೊಳಗೆ ಯಡಿಯೂರಪ್ಪ ಯುಗ ಮುಗಿಯಿತು ಎಂದುಕೊಳ್ಳೋ ಹೊತ್ತಿಗೆ ದಿಢೀರ್ ನಡೆದ ಈ ಸಭೆ ರಾಜ್ಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಯಡಿಯೂರಪ್ಪ ಕರ್ನಾಟಕದಲ್ಲಿ ಬಿಜೆಪಿ ಕಟ್ಟಿಬೆಳೆಸಿದ ಭೀಷ್ಮ ನಾಯಕ. ಇಡೀ ದಕ್ಷಿಣ ಭಾರತದಲ್ಲಿ ಕೇಸರಿ ಪತಾಕೆ ನೆಟ್ಟ ಗಜಕೇಸರಿ. 2021ರಲ್ಲಿ ಅಧಿಕಾರ ಹಸ್ತಾಂತರದ ಮೂಲಕ ತೆರೆಗೆ ಸರಿದ ಬಿಎಸ್ವೈಗೆ ರಾಜ್ಯದಲ್ಲಿ ಕರಗದ ಅಭಿಮಾನಿಗಳ ಸಾಗರವೇ ಇದೆ. ಈ ಸಾಗರವೇ ಈಗ ಬಿಜೆಪಿಯನ್ನ ಆತಂಕದ ಕಡಲಿಗೆ ನೂಕಿದೆ. ಬಿಎಸ್ವೈ ರಾಜಕೀಯ ಯುಗಾಂತ್ಯ ಅಂತ ಷರಾ ಬರೆದಿದ್ದ ರಾಜಕೀಯ ಪಂಡಿತರಿಗೆ ಡೆಲ್ಲಿಯ ಈ ಬೆಳವಣಿಗೆ ಕರೆಂಟ್ ಶಾಕ್ ಹೊಡೆಸಿದೆ.
ಸಂಚಲನ ಸೃಷ್ಟಿಸಿದ ಬಿಎಸ್ವೈ ಜೊತೆ ಮೋದಿ ಮೀಟಿಂಗ್
ಕುತೂಹಲ ಹುಟ್ಟಿಸಿದ ಆ 15 ನಿಮಿಷಗಳ ಇಬ್ಬರ ಮಾತುಕತೆ
ವಿಧಾನಸಭೆ ಚುನಾವಣೆಗೆ ಕುಟುಂತ್ತಾ ಸಾಗ್ತಿರುವ ಬಿಜೆಪಿಗೆ ಹುರುಪು, ಹುಮ್ಮಸ್ಸು, ಉತ್ಸಾಹ ಇಲ್ಲದೇ ತೆವಳುತ್ತಿದೆ. ಕಳೆದ ವಾರ ರಾಜ್ಯಕ್ಕೆ ಬಂದಿದ್ದ ಪ್ರಧಾನಿ ಮೋದಿಗೆ ರಾಜ್ಯ ಬಿಜೆಪಿ ಸಂಕಟಗಳ ನಾಡಿಮಿಡಿತ ಕಂಡು ಅಲ್ಪಮಟ್ಟಿಗೆ ವ್ಯಾಕ್ಸಿನ್ ನೀಡಿ ಡೆಲ್ಲಿಗೆ ಮರಳಿದ್ದರು. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಕರ್ನಾಟಕ ರಾಜಕಾರಣದಲ್ಲಿ ಘಟಿಸ್ತಿರುವ ಪಲ್ಲಟಗಳ ಬಗ್ಗೆ ಮಾಹಿತಿ ಕಲೆಹಾಕಿದ್ರು. ಈ ವೇಳೆ, ಪ್ಯಾನ್ ಕರ್ನಾಟಕ ನಾಯಕ ಯಡಿಯೂರಪ್ಪರನ್ನ ಕರೆಸಿಕೊಂಡು ಪ್ರತ್ಯೇಕ ಮಾತುಕತೆ ನಡೆಸಿದ್ದು ಕುತೂಹಲಕ್ಕೆ ಕಾರಣವಾಗಿದೆ.