ವಾಹನ ಚಾಲಕರಿಗೆ ಮತ್ತೊಂದು ಮರ್ಮಾಘಾತ ನೀಡಲು ಸರ್ಕಾರದ ಚಿಂತನೆ

ವಾಹನ ಚಾಲಕರಿಗೆ ಮತ್ತೊಂದು ಮರ್ಮಾಘಾತ ನೀಡಲು ಸರ್ಕಾರದ ಚಿಂತನೆ

ಬೆಂಗಳೂರು: ಟೋಲ್​ಪ್ಲಾಜಾಗಳಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವುದನ್ನು ತಪ್ಪಿಸಲೆಂದು 2016ರಲ್ಲಿ ಫಾಸ್ಟ್ಯಾಗ್ ವ್ಯವಸ್ಥೆ ಜಾರಿಗೆ ತರಲಾಯಿತು. ಈ ವ್ಯವಸ್ಥೆಯಡಿ ವಾಹನವೊಂದು ಟೋಲ್ ಪ್ಲಾಜಾ ದಾಟಿದ ತಕ್ಷಣ ಹಣ ಕಡಿತಗೊಳ್ಳುತ್ತದೆ. ಫಾಸ್ಟ್ಯಾಗ್ ಜಾರಿಯಾದ ನಂತರ ಹೆದ್ದಾರಿಗಳಲ್ಲಿ ವಾಹನ ಸಂಚಾರ ಸುಗಮವಾಗಿತ್ತು. ಇದೀಗ ಸರ್ಕಾರವು ಮತ್ತೊಂದು ಸುಧಾರಣೆಯನ್ನು ಜಾರಿಗೆ ತರಲು ಮುಂದಾಗಿದೆ.
ಜಿಪಿಎಸ್ ಉಪಗ್ರಹ ತಂತ್ರಜ್ಞಾನವನ್ನು ಟೋಲ್ ನಿಗದಿಪಡಿಸಲು ಬಳಸಿಕೊಳ್ಳಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಹೆದ್ದಾರಿಗಳಲ್ಲಿ ವಾಹನ ಸಂಚರಿಸಿದಷ್ಟು ದೂರವನ್ನು ಲೆಕ್ಕ ಹಾಕಿ ಟೋಲ್ ನಿಗದಿಪಡಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ.

ಒಂದು ಹೆದ್ದಾರಿಯಲ್ಲಿ ವಾಹನವು ಎಷ್ಟು ದೂರ ಸಂಚರಿಸಿದೆ ಎನ್ನುವುದನ್ನು ಲೆಕ್ಕ ಹಾಕಿ ಎಷ್ಟು ಟೋಲ್ ಪಾವತಿಸಬೇಕು ಎನ್ನುವುದನ್ನು ನಿಗದಿಪಡಿಸಲಾಗುತ್ತದೆ. ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಕಳೆದ ಮಾರ್ಚ್​ನಲ್ಲಿ ಲೋಕಸಭೆಯಲ್ಲಿ ಮಾತನಾಡುವಾಗ ಇನ್ನೊಂದು ವರ್ಷದಲ್ಲಿ ದೇಶಾದ್ಯಂತ ಟೋಲ್​ಪ್ಲಾಜಾ ತೆಗೆದುಹಾಕಲಾಗುವುದು ಎಂದು ಹೇಳಿದ್ದರು.
ಚಲಿಸುವ ವಾಹನಗಳು ಟೋಲ್ ರಸ್ತೆಯಲ್ಲಿ ಎಷ್ಟು ದೂರ ಸಂಚರಿಸಿವೆ ಎಂಬುದನ್ನು ಕರಾರುವಾಕ್ಕಾಗಿ ಲೆಕ್ಕ ಹಾಕಿ ಈ ವ್ಯವಸ್ಥೆಯು ಟೋಲ್ ಸಂಗ್ರಹಿಸಲಿದೆ. ಹಾಲಿ ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ ಎಕ್ಸ್​ಪ್ರೆಸ್ ವೇ ಅಥವಾ ಹೆದ್ದಾರಿಯಲ್ಲಿ ಸಾಗುವ ಎಲ್ಲ ವಾಹನಗಳು ಒಂದು ಟೋಲ್ ದಾಟುವಾಗ ಮತ್ತೊಂದು ಟೋಲ್​ವರೆಗಿನ ಅಂತರಕ್ಕೆ ಇಡಿಯಾಗಿ. ವಾಹನ ಎಷ್ಟು ದೂರ ಚಲಿಸಿತು ಎನ್ನುವುದನ್ನು ಪರಿಗಣಿಸಲು ಅವಕಾಶವಿಲ್ಲ. ಹೀಗಾಗಿ ಟೋಲ್​ಬೂತ್​ಗಳ ಜಾಗದಲ್ಲಿ ಜಿಪಿಎಸ್-ಆಧರಿತ ಟೋಲ್ ಸಂಗ್ರಹ,ವ್ಯವಸ್ಥೆ ಜಾರಿಗೆ ಬರಲಿದೆ.
ಬ್ಯುರೊ ರಿಪೋರ್ಟ್ 9 ಲೈವ್ ನ್ಯೂಸ್