ʻಭಾರತವೇ ನನಗೆ ಸರ್ವಸ್ವʼ; ಕೆನಡಾ ಪೌರತ್ವ ಬದಲಾವಣೆಗೆ ಅರ್ಜಿ ಸಲ್ಲಿಸಿದ ಬಾಲಿವುಡ್ ನಟ ʻಅಕ್ಷಯ್ ಕುಮಾರ್ʼ | Akshay Kumar

ʻಭಾರತವೇ ನನಗೆ ಸರ್ವಸ್ವʼ; ಕೆನಡಾ ಪೌರತ್ವ ಬದಲಾವಣೆಗೆ ಅರ್ಜಿ ಸಲ್ಲಿಸಿದ ಬಾಲಿವುಡ್ ನಟ ʻಅಕ್ಷಯ್ ಕುಮಾರ್ʼ | Akshay Kumar

ವದೆಹಲಿ: ಕೆನಡಾದ ಪೌರತ್ವದ ಬಗ್ಗೆ ಆಗಾಗ್ಗೆ ಟೀಕೆಗಳನ್ನು ಎದುರಿಸುತ್ತಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್(Akshay Kumar) ʻಭಾರತವೇ ನನಗೆ ಸರ್ವಸ್ವವಾಗಿದ್ದು, ಕೆನಡಾದ ಪೌರತ್ವ ಬದಲಾವಣೆಗೆ ಈಗಾಗಲೇ ಅರ್ಜಿ ಸಲ್ಲಿಸಿದ್ದೇನೆʼ ಎಂದು ಹೇಳಿದ್ದಾರೆ.

ಹಲವು ವರ್ಷಗಳಿಂದ ಭಾರತದಲ್ಲೇ ನೆಲೆಯೂರಿರುವ, ಭಾರತದವರೇ ಆಗಿರುವ ಅಕ್ಷಯ್ ಕುಮಾರ್ ಈವರೆಗೂ ಭಾರತದ ಪೌರತ್ವನ್ನು ಹೊಂದಿರಲಿಲ್ಲ. ಹಾಗಾಗಿ ಪೌರತ್ವದ ವಿಷಯದಲ್ಲಿ ಪದೇ ಪದೇ ಟೀಕೆಗೆ ಒಳಗಾಗುತ್ತಿದ್ದರು.

ಆದ್ರೆ, ಇದೀಗ ಕೆನಡಾ ಪೌರತ್ವ ಬದಲಾಯಿಸಲು ನಿರ್ಧರಿಸಿರುವುದಾಗಿ ಸ್ವತಃ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅಕ್ಷಯ್, ʻಭಾರತವೇ ನನಗೆ ಸರ್ವಸ್ವ. ಅದು ಎಲ್ಲವನ್ನೂ ನನಗೆ ಕೊಟ್ಟಿದೆ. ನಾನು ಇಲ್ಲಿಯವನು ಎಂದು ಹೇಳಿಕೊಳ್ಳಲು ಹೆಮ್ಮೆ ಅನಿಸುತ್ತದೆ. ನಾನು ಗಳಿಸಿದ್ದೆಲ್ಲ ಇಲ್ಲಿಂದ, ಅದನ್ನು ಮರಳಿ ಕೊಡುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಆದ್ರೆ, ಜನರು ಅದನ್ನು ತಿಳಿಯದೇ ಮಾತನಾಡೋದು ಬೇಸರವಾಗುತ್ತದೆʼ ಎಂದಿದ್ದಾರೆ.

1990ರ ದಶಕದಲ್ಲಿ ಅಕ್ಷಯ್ ಬಹುತೇಕ ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿದವು. ರಿಲೀಸ್ ಆದ ಅಷ್ಟೂ ಸಿನಿಮಾಗಳು ಸೋತವು. ಈ ಕಾರಣದಿಂದಾಗಿ ಅವರು ಕೆನಡಾ ಪೌರತ್ವಕ್ಕೆ ಅರ್ಜಿ ಸಲ್ಲಿಸಿರುವುದಾಗಿ ಹೇಳಿಕೊಂಡಿದ್ದಾರೆ.