ಬಿಹಾರದಲ್ಲಿ 80ಕ್ಕೂ ಹೆಚ್ಚು ಜನರಿಗೆ 'ಬೀದಿನಾಯಿ ಅಟ್ಯಾಕ್' : ಆಸ್ಪತ್ರೆ ದಾಖಲು
ಬಿಹಾರ : ದೇಶದಲ್ಲಿ ಬೀದಿನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ಇದೀಗ ಬಿಹಾರದ ನಗರದಲ್ಲಿ ಮಕ್ಕಳು ಸೇರಿದಂತೆ 80 ಕ್ಕೂ ಹೆಚ್ಚು ಜನರ ಮೇಲೆ ಬೀದಿನಾಯಿ ಅಟ್ಯಾಕ್ ಮಾಡಿದ್ದು ಬೆಳಕಿಗೆ ಬಂದಿದೆ.ಬೀದಿ ನಾಯಿ ಕಡಿತಗೊಂಡು ಬರೊಬ್ಬರಿ 80 ಜನರು ಅರ್ರಾಹ್ ನ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.ಬೀದಿ ನಾಯಿ ಕಡಿತಗೊಂಡು ಬರೊಬ್ಬರಿ 80 ಜನರು ಅರ್ರಾಹ್ ನ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ರೋಗಿಗಳಲ್ಲಿ, 10-12 ಮಕ್ಕಳು. ರೋಗಿಗಳಿಗೆ ಪ್ರಥಮ ಚಿಕಿತ್ಸೆನೀಡಲಾಗಿದೆ ಎಂದು ವೈದ್ಯರು ಡಾ.ನವನೀತ್ ಕುಮಾರ್ ಚೌಧರಿ ಮಾಹಿತಿ ನೀಡಿದ್ದಾರೆ. ಬೀದಿನಾಯಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ.