ದಾಖಲೆ ಬರೆದ ಬ್ಯಾಡಗಿ ಮೆಣಸಿನಕಾಯಿ ದರ

ದಾಖಲೆ ಬರೆದ ಬ್ಯಾಡಗಿ ಮೆಣಸಿನಕಾಯಿ ದರ

ಹಾವೇರಿ: ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬ್ಯಾಡಗಿ ಮೆಣಸಿನಕಾಯಿ ದರ ದಾಖಲೆ ಬರೆದಿದೆ. ಸೋಮವಾರದ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಡಬ್ಬಿ ತಳಿ ದರ 52,569 ರೂಪಾಯಿ ಹಿಂದಿಕ್ಕಿದ ಕಡ್ಡಿ ಮೆಣಸಿನಕಾಯಿ 55,589 ರೂ.ಗೆ ಮಾರಾಟವಾಗಿ ದಾಖಲೆ ಬರೆದಿದೆ. ಮೆಣಸಿನಕಾಯಿ ಆವಕದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದ್ದು, ಮೂರು ತಳಿಯ ಮೆಣಸಿನ ಕಾಯಿಗೆ ಉತ್ತಮ ಧಾರಣೆ ದೊರೆತಿದೆ.