ತಲೆಮರೆಸಿಕೊಂಡಿದ್ದ ಸರಗಳ್ಳನ ಬಂಧನ Kalaburagi Police
ಕಲಬುರಗಿ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ೪೮ ಗಂಟೆಗಳಲ್ಲಿ ಬಂಧಿಸುವಲ್ಲಿ ರೋಜಾ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಗೌಸ್ ಪಟೇಲ್ (೨೪) ಬಂಧಿತ ಆರೋಪಿ. ಕಲಬುರಗಿ ನಗರದ ಪಾಶಾಪೂರ ರೋಜಾ ಬಡಾವಣೆಯ ನಿವಾಸಿಯಾದ ಗೌಸ್ ಪಟೇಲ್, ಎಂಬಿಎ ವ್ಯಾಸಂಗ ಮಾಡುತ್ತಿದ್ದಾನೆ. ಬಂಧಿತನಿAದ ೨೧ ಗ್ರಾಂ ಚಿನ್ನಾಭರಣ ಮತ್ತು ೨,೮೭,೦೦೦ ರೂ.ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಐಷಾರಾಮಿ ಜೀವನ ನಡೆಸಲು ಆರೋಪಿ, ರೋಜಾ ಠಾಣಾ ವ್ಯಾಪ್ತಿಯಲ್ಲಿ ಹಗಲು ಹೊತ್ತಿನಲ್ಲಿ ಮನೆಯೊಂದಕ್ಕೆ ಕನ್ನ ಹಾಕಿ ಪರಾರಿಯಾಗಿದ್ದ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ರೋಜಾ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.