ಬೆಲೆ ಏರಿಕೆ ಸಾಮಾನ್ಯ ಜನರು ಬದಕೋದು ಹೇಗೆ ಶಾಸಕ ಅಮರೇಗೌಡ ಬಯ್ಯಾಪೂರ

ಬೆಲೆ ಏರಿಕೆ ಸಾಮಾನ್ಯ ಜನರ ಜೀವ ಹಿಂಡುತ್ತಿದೆ. ಶ್ರೀಮಂತರಿಗೆ ಬೆಲೆ ಏರಿದರೇನೂ ಬಿಟ್ಟರೆಷ್ಟು,ಆದ್ರೆ ಸಾಮಾನ್ಯ ಜನರು ಬದಕೋದು ಹೇಗೆ ಅಂತ ಕೈ ಶಾಸಕ ಅಮರೇಗೌಡ ಬಯ್ಯಾಪೂರ ಕೊಪ್ಪಳ ಜಿಲ್ಲೆ ಕುಷ್ಟ ಗಿಯಲ್ಲಿ ಇಂದು ಆಕ್ರೋಶ ವ್ಯಕ್ತ ಪಡಿಸಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಡಿಸೇಲ್ ಮತ್ತು ಪೆಟ್ರೋಲ್ ದರ ನಿತ್ಯ ಏರಿಕೆಯಾಗ್ತಿದೆ. ಅಡುಗೆ ಎಣ್ಣೆ ದರ 200 ರೂಪಾಯಿ ಗೆ ಒಂದು ಕೆ.ಜಿ.ಯಾಗಿದೆ. ಹೀಗಾದರೆ ಬಡವರು ಬದಕೋದು ಹೇಗೆ ಅಂತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಮೋದಿ ಎಲ್ಲ ರಂಗದಲ್ಲೂ ವಿಫಲವಾಗಿದ್ದಾರೆ, ಏಳು ವರ್ಷದಲ್ಲಿ ಮೋದಿ ಯಾವದೇ ಒಂದು ಕಾರ್ಯಕ್ರಮ ಕೊಟ್ಟಿಲ್ಲ ನಾವು 60 ವರ್ಷದಲ್ಲಿ ಎಷ್ಟು ಸಾಲ ಮಾಡಿದ್ದೇವೋ,ಅದರ ಎರಡಷ್ಟು ಮೋದಿ ಸಾಲ ಮಾಡಿದ್ದಾರೆ ಎಂದರು.