ಭಾರತದಲ್ಲಿ 100 ಕೋಟಿ ಲಸೀಕರಣ ಹಿನ್ನೆಲೆ ಕೊಪ್ಪಳ ಜಿಲ್ಲಾಡಳಿತದಿಂದ ಸ0ಭ್ರಮಾಚರಣೆ
ಭಾರತದಲ್ಲಿ 100 ಕೋಟಿ ಲಸೀಕರಣವಾದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಡಳಿತದಿಂದ ಇಂದು ಸ0ಭ್ರಮಾಚರಣೆಯ ಲಸಿಕಾ ಮಹಾಮೇಳ ಆಯೋಜಿಸಲಾಗಿತ್ತು. ಮೇಳವನ್ನು ಸಚಿವ ಹಾಲಪ್ಪ ಆಚಾರ ಚಾಲನೆ ನೀಡಿದರು ಲಸಿಕಾ ಮೇಳವು ಕುಕನೂರು ತಾಲೂಕಿನ ಭಾನಾಪುರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಒಟ್ಟು 60 ಸಾವಿರ ಡೋಸ್ ಲಸಿಕೆ ನೀಡುವ ಗುರಿಯನ್ನು ಜಿಲ್ಲಾಡಳಿತ ಹೊಂದಿದೆ. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಫೌಜೀಯಾ ತರನ್ನುಮ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.