ಪಾನಿಪೂರಿ ತಿನ್ನುವ ಮುನ್ನ ಎಚ್ಚರ...ಎಚ್ಚರ...

ಮಹಿಳೆಯರಿಗೆ ಮತ್ತು ಕಾಲೇಜು ವಿದ್ಯಾರ್ಥಿನಿಗಳಿಗೆ ಮಡಿಕೆ ಪಾನಿಪೂರಿ (ಗೋಲ್ಗಪ್ಪ) ಅಂದ್ರೆ ಬಲು ಇಷ್ಟ ಆದರೆ ತಿನ್ನುವ ಮೊದಲು ಅದರ ಸತ್ಯಾಸತ್ಯತೆ ತಿಳಿದು ಕೊಳ್ಳುವುದು ಮುಖ್ಯ. ಇಲ್ಲ ಅಂದ್ರೆ ಆಸ್ಪತ್ರೆ ಸೇರೋದು ಗ್ಯಾರಂಟಿ. ಅದು ಹೇಗೆ ಅಂತಿರಾ ಈ ಸ್ಟೋರಿ ನೋಡಿ. ಚಿಕ್ಕಮಗಳೂರಿನ ಎಂ.ಜಿ.ರಸ್ತೆ, ಹಾಗೂ ಐ.ಜಿ. ರಸ್ತೆಯಲ್ಲಿ ಮಡಿಕೆ ಪಾನಿ ಪೂರಿ ಮಾರಾಟ ಮಾಡುತ್ತಿದ್ದ ಈ ಡಬ್ಬಾ ಅಂಗಡಿಗೆ ದಿನಾ ಅದೆಷ್ಟೋ ಜನ ಪಾನಿಪುರಿ ಸವಿಯಲು ಬರುತ್ತಾರೆ. ಆದರೆ ಇಂದು ಪಾನಿಪುರಿ ಅಂಗಡಿ ಹತ್ತಿರ ದುರ್ನಾತ ಬೀರುತ್ತಿದ್ದ ಹಿನ್ನೆಲೆ ರಸ್ತೆಯಲ್ಲಿ ಹೋಗುತ್ತಿದ್ದ ಯುವಕರು ಪರಿಶೀಲನೆ ನಡಿಸಿದಾಗ ಕೊಳೆತು ಹೋಗಿರುವ ಆಲೂಗೆಡ್ಡೆಯಲ್ಲಿ ಹುಳುಗಳು ಪತ್ತೆಯಾಗಿವೆ. ಮಡಿಕೆ ಪಾನಿಪೂರಿಯಲ್ಲಿ ಹುಳ ಇರುವ ಕೊಳೆತ ಆಲೂಗೆಡ್ಡೆಗಳನ್ನು ಬೆರೆಸಿ ಪಾನಿಪುರಿ ಮಾಡಿ ಗ್ರಾಹಕರಿಗೆ ನೀಡಲಾಗುತ್ತಿತ್ತು. ಇದು ಗೊತ್ತಾಗುತ್ತಿದ್ದಂತೆ ರೊಚ್ಚೆಗೆದ್ದ ಯುವಕರು ಪಾನಿಪೂರಿ ಮಾರಾಟ ಮಾಡುತ್ತಿದ್ದ ವ್ಯಾಪಾರಸ್ಥರಿಗೆ ಧರ್ಮೇದೇಟು ನೀಡಿದ್ದಾರೆ.