ನೀರಿಗೆ ಬಿದ್ದು ಯುವತಿ ಸಾವು

ಬಟ್ಟೆ ಒಗೆಯಲು ಹೋಗಿ ಕಾಲು ಜಾರಿ ತುಂಗಾ ಮೆಲ್ದಂಡೆ ಕಾಲುವೆಗೆ ಬಿದ್ದ ಪರಿಣಾಮವಾಗಿ ಯುವತಿಯೋರ್ವಳು ಸಾವನ್ನಪ್ಪಿದ ಘಟನೆ ರಟ್ಟೀಹಳ್ಳಿ ತಾಲ್ಲೂಕಿನ ಶಿರಗಂಬಿ ಗ್ರಾಮದಲ್ಲಿ ನಡೆದಿದೆ.ಮೃತ ಯುವತಿ 21 ವಯಸ್ಸಿನ ಸವಿತಾ ಬೊಮ್ಮಣ್ಣನವರ್ ಎಂದು ತಿಳಿದು ಬಂದಿದೆ. ಸ್ನೇಹಿತೆ ಜೊತೆ ಬಟ್ಟೆ ಒಗೆಯಲು ಹೋದ ಸಂಧರ್ಭದಲ್ಲಿ ಈ ದುರಂತ ನಡೆದಿದೆ. ಅಗ್ನಿಶಾಮಕ ಹಾಗೂ ಸ್ಥಳೀಯರ ಸಹಾಯ ದಿಂದ ಮೃತ ದೇಹವನ್ನು ಹೊರ ತೆಗೆಯಲಾಯಿತು. ಆಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ರಟ್ಟೀಹಳ್ಳಿ ಪೊಲೀಸರ ಭೇಟಿ ನೀಡಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.