ನೀವೆಲ್ಲ ನೋಡಿದ್ದು ಕಾಂತಾರ 2, ಮುಂದೆ ಬರೋದು ಕಾಂತಾರ 1: ನಟ ರಿಷಬ್ ಶೆಟ್ಟಿ

ನೀವೆಲ್ಲ ನೋಡಿದ್ದು ಕಾಂತಾರ 2, ಮುಂದೆ ಬರೋದು ಕಾಂತಾರ 1: ನಟ ರಿಷಬ್ ಶೆಟ್ಟಿ

ಕಾಂತಾರ ಸಿನಿಮಾ ನೋಡಿದ ಪ್ರತಿಯೊಬ್ಬರು ಕಾಂತಾರ 2 ನೋಡಲು ಕಾದು ಕೂತಿದ್ದಾರೆ. ಸಾಕಷ್ಟು ದಿನಗಳ ಹಿಂದೆಯೇ ಹೊಂಬಾಳೆ ಫಿಲ್ಮ್ಸ್ ನ ಮಾಲಿಕ ವಿಜಯ್ ಕಿರಗಂದೂರು ಕಾಂತಾರ 2 ಚಿತ್ರ ತಯಾರಾಗುತ್ತಿದೆ ಎಂದು ಹೇಳಿದ್ದರು. ಇದೀಗ ನಟ ಕಂ ನಿರ್ದೇಶಕ ರಿಷಬ್ ಶೆಟ್ಟಿ ಇದೇ ಮೊದಲ ಬಾರಿಗೆ ಕಾಂತಾರ 2 ಬಗ್ಗೆ ಮಾತನಾಡಿದ್ದಾರೆ.

ಕಾಂತಾರ ಶತದಿನೋತ್ಸವ ಸಂಭ್ರಮದಲ್ಲಿ ರಿಷಬ್ ಹೇಳಿದ ಮಾತು ಕೇಳಿ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಯಾವುದೇ ಸಿನಿಮಾದ ಭಾಗ 2 ಎಂದರೆ ಅಂದರೆ ಅದು ಕಥೆಯ ಮುಂದುವರೆದ ಭಾಗವನ್ನು ಹೇಳುತ್ತದೆ. ಆದರೆ ಕಾಂತಾರ ಸಿನಿಮಾದ ವಿಚಾರದಲ್ಲಿ ಹಾಗಲ್ಲ. ಕಾಂತಾರ ಸೀಕ್ವೆಲ್ ಬದಲು ರಿಷಬ್‌ ಶೆಟ್ಟಿ ಪ್ರೀಕ್ವೆಲ್ ಹೇಳಲು ಹೊರಟಿದ್ದಾರೆ.

ಕಾಂತಾರ 100 ದಿನಗಳ ಸಂಭ್ರಮಾಚರಣೆಯ ಸಂದರ್ಭದಲ್ಲಿ ರಿಷಬ್ ಶೆಟ್ಟಿ, ಕಾಂತಾರ 2 ಖಂಡಿತವಾಗಿಯೂ ತಯಾರಾಗುತ್ತಿದೆ ಎಂದು ಖಚಿತಪಡಿಸಿದ್ದಾರೆ. ಈ ಸಿನಿಮಾ ಅಂತರಾಷ್ಟ್ರೀಯ ಮಟ್ಟಕ್ಕೆ ಹೋಗಲು ಕಾರಣ ಪ್ರೇಕ್ಷಕರು. ಅವರನ್ನು ಮರೆಯುವಂತಿಲ್ಲ. ಎಲ್ಲರಿಗೂ ಧನ್ಯವಾದ. ಮಾಧ್ಯಮ ಹಾಗೂ ನಮ್ಮ ತಂಡದ ಎಲ್ಲರ ಸಹಕಾರದಿಂದ ಇಷ್ಟು ದೊಡ್ಡಮಟ್ಟಕ್ಕೆ ಸಿನಿಮಾ ತಲುಪಿದೆ. ಕಾಂತಾರ - 2 ಯಾವಾಗ ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ ನೀವು ನೋಡಿರೋ ಸಿನಿಮಾನೇ ಕಾಂತಾರ ಪಾರ್ಟ್ 2. ಅತಿ ಶೀಘ್ರದಲ್ಲೇ ಕಾಂತಾರ ಪಾರ್ಟ್‌ - 1 ಬರುತ್ತದೆ. ಅಷ್ಟು ಮಾತ್ರ ಈಗ ನಾನು ಹೇಳಬಹುದು ಎಂದು ರಿಷಬ್‌ ಹೇಳಿದ್ದಾರೆ.

ಸಿನಿ ಅಭಿಮಾನಿಗಳು ಕಾಂತಾರ 2 ಯಾವಾಗ ಎಂದು ಪ್ರಶ್ನಿಸುತ್ತಿದ್ದರು. ಈಗ ಅದಕ್ಕೆ ರಿಷಬ್ ಶೆಟ್ಟಿ ಉತ್ತರ ಕೊಟ್ಟಿದ್ದಾರೆ. ದೇಶಕ್ಕೆ ದೇಶವೇ ಹೆಮ್ಮೆ ಪಟ್ಟ ಕಾಂತಾರ ಸಿನಿಮಾ ಸದ್ಯ ಆಸ್ಕರ್‌ ರೇಸ್‌ನಲ್ಲಿದೆ. ಹಲವು ದಾಖಲೆಗಳನ್ನು ಕಾಂತಾರ ಸಿನಿಮಾ ಬ್ರೇಕ್ ಮಾಡಿದೆ.