ಅರಣ್ಯ ರಕ್ಷಕನೇ ಭಕ್ಷಕನಾದ ಕಥೆ ಇದು.! ಥೂ ನಿನ್ ಜನ್ಮಕ್ಕೆ.?!

ಅರಣ್ಯ ರಕ್ಷಕನೇ ಭಕ್ಷಕನಾದ ಕಥೆ ಇದು.! ಥೂ ನಿನ್ ಜನ್ಮಕ್ಕೆ.?!

ರಣ್ಯವನ್ನ ರಕ್ಷಣೆ ಮಾಡಬೇಕಾದ ಅಧಿಕಾರಿ ಅರಣ್ಯ ಸಂಪತ್ತನ್ನ ಲೂಟಿ ಮಾಡಲು ಹೋಗಿ ಅಮಾನತು

ಆಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಮೀಸಲು ಅರಣ್ಯ ವಲಯ ವ್ಯಾಪ್ತಿಯಲ್ಲಿ ನಡೆದಿದೆ. ಆಲ್ದೂರು ಸಮೀಪದ ಬಸರವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅನಿಗನಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬೀಟೆ ಮರವನ್ನ ಕಡಿದು ಮಾರಾಟ ಮಾಡಿದ್ದ ಆಲ್ದೂರು ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ದರ್ಶನ್ ಸಿಕ್ಕಿ‌ಬಿದ್ದಿದ್ದು,

ಅವರನ್ನ ಅಮಾನತು ಮಾಡಿ DFO ಕ್ರಾಂತಿ ಆದೇಶ ಮಾಡಿದ್ದಾರೆ.

ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಸಿಗುವ ಲಕ್ಷಾಂತರ ಮೌಲ್ಯದ ಮರಗಳನ್ನು ಅಕ್ರಮವಾಗಿ ಕಡಿದು, ಅರಣ್ಯ ಇಲಾಖೆಯ ಸಿಬ್ಬಂದಿ ತಮ್ಮ ಮನೆಗಳ ಪೀಠೋಪಕರಣ ಮತ್ತು ಬೀಟೆ ಮರಗಳನ್ನು ಮಾರಾಟ ಮಾಡಿ ಅಕ್ರಮವಾಗಿ ಹಣಗಳಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಚಿಕ್ಕಮಗಳೂರು ಜಿಲ್ಲೆಯ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಳಿ ಬರುತ್ತಿದ್ದು

ಮೀಸಲು ಅರಣ್ಯದಲ್ಲಿ ಕಳ್ಳತನವಾಗಿರುವ ಮರಗಳ ಕುರಿತು ಸಮಗ್ರ ತನಿಖೆಗೆ ನಡೆಸುವಂತೆ ಸ್ಥಳೀಯರು, ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ‌ ಎನ್ನಲಾಗಿದೆ.