ರಫೈಲ್ ಖರೀದಿಯಲ್ಲಿ ಲಂಚ ಪಡೆದ ಯುಪಿಎ ಸರ್ಕಾರ

ನವದೆಹಲಿ,ನ.9- ರಫೈಲ್ ಹಗರಣದಲ್ಲಿ ಯುಪಿಎ ಸರ್ಕಾರ ಲಂಚ ಪಡೆದಿತ್ತು ಎಂಬ ಫ್ರೆಂಚ್ ಮಾಧ್ಯಮದ ವರದಿ ರಾಷ್ಟ್ರ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಆರೋಪ- ಪ್ರತ್ಯಾರೋಪಗಳಿಗೆ ಕಾರಣವಾಗಿದೆ.
ಕಾಂಗ್ರೆಸ್ ಪ್ರತಿಯೊಂದು ವ್ಯವಹಾರದಲ್ಲೂ ಒಳವ್ಯವಹಾರ ಮಾಡುವುದು ಸಾಮಾನ್ಯ. ಯುಪಿಎ ಅವಧಿಯಲ್ಲಿ ರಫೈಲ್ ಭ್ರಷ್ಟಾಚಾರದ ಬಗ್ಗೆ ಹೆಚ್ಚು ಪ್ರಚಾರವಾಗಲಿಲ್ಲ. ಈಗಲೂ ಅವರು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಸಂಬೀತ್ ಪಾತ್ರ ತಿರುಗೇಟು ನೀಡಿದ್ದಾರೆ.
ಆದರೆ ಈ ಆರೋಪವನ್ನು ಕಾಂಗ್ರೆಸ್ ತಳ್ಳಿ ಹಾಕಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳನ್ನು ದುರ್ಬಳಕೆ ಮಾಡಿಕೊಂಡು ರಫೈಲ್ ಹಗರಣವನ್ನು ಮುಚ್ಚಿ ಹಾಕಿದೆ. ಸತ್ಯಗಳನ್ನು ಸಮಾಧಿ ಮಾಡಿದೆ ಎಂದು ಆರೋಪಿಸಿದೆ.
ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬಿಜೆಪಿ ಆರೋಪಕ್ಕೆ ಪ್ರಕ್ರಿಯೆ ನೀಡಿದ್ದು, ಪ್ರತಿ ಹೆಜ್ಜೆಯಲ್ಲೂ ಸತ್ಯ ನಮ್ಮ ಕಣ್ಣೆದುರಿಗೆ ಇದೆ. ಹಾಗಿದ್ದರೂ ಏನೂ ಪ್ರಯೋಜನವಾಗಿಲ್ಲ. ಕಾಂಗ್ರೆಸ್‍ನ ನನ್ನ ಸಹೋದ್ಯೋಗಿಗಳು ಹೆದರಿಕೊಳ್ಳುವುದು ಬೇಡ. ಆಯಾಸ ಪಡಬೇಡಿ. ಅನಗತ್ಯವಾಗಿ ವಿಳಂಬ ಮಾಡದೇ ಕೇಂದ್ರ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟವನ್ನು ಮುಂದುವರೆಸಿ ಎಂದು ಕರೆ ನೀಡಿದ್ದಾರೆ.
2013ರಲ್ಲಿ ಆಗಿನ ಕೇಂದ್ರ ಸರ್ಕಾರದ ಜೊತೆ ರಫೈಲ್ ಒಪ್ಪಂದವಾಗಿತ್ತು. 36 ಯುದ್ಧ ವಿಮಾನಗಳನ್ನು ಮಾರಾಟ ಮಾಡಿಸಿಕೊಡಲು ಫ್ರೆಂಚ್‍ನನ ಡೆಸಾಲ್ಟ್ ಸಂಸ್ಥೆ ಮಧ್ಯವರ್ತಿ ಸುಸೈನ್ ಗುಪ್ತನಿಗೆ 7.5 ಮಿಲಿಯನ್ ಯೂರೋ(650 ಮಿಲಿಯನ್ ಡಾಲರ್) ಕಮೀಷನ್ ನೀಡಿತ್ತು ಎಂದು ಫ್ರೆಂಚ್‍ನ ಮೀಡಿಯಾ ಪಾರ್ಟ್ ವೆಬ್‍ಸೈಟ್ ವರದಿ ಮಾಡಿದೆ.
ಈ ಕುರಿತಂತೆ ಸ್ಪಷ್ಟ ದಾಖಲಾತಿ ಇದ್ದರೂ ಭಾರತೀಯ ಪೊಲೀಸ್ ಒಕ್ಕೂಟ ತನಿಖೆ ಮಾಡಲು ವಿಫಲವಾಗಿವೆ. ಸಿಬಿಐ ಮತ್ತು ಇಡಿ ಬಳಿ ಈ ಕುರಿತಂತೆ ದಾಖಲಾತಿಗಳಿವೆ ಎಂದು ವೆಬ್‍ಸೈಟ್‍ನಲ್ಲಿ ವರದಿಯಾಗಿದೆ. ಇದು ಪ್ರಸ್ತುತ ಭಾರೀ ಚರ್ಚೆಗೆ ಗ್ರಾಸವಾಗಿದೆ.
2019ರ ಲೋಕಸಭೆ ಚುನಾವಣೆ ಅವಯಲ್ಲಿ ರಫೈಲ್ ಹಗರಣವನ್ನು ಕಾಂಗ್ರೆಸ್ ಪ್ರಮುಖವಾಗಿ ಪ್ರಸ್ತಾಪಿಸಿತ್ತು. ಪ್ರಧಾನಿ ಮೋದಿ ಅವರನ್ನೇ ಗುರಿಯಾಗಿಸಿಕೊಂಡು ನಿರಂತರ ವಾಗ್ದಾಳಿ ನಡೆಸಿತ್ತು. ಈಗ ಬಿಜೆಪಿ ಅದೇ ಆರೋಪಗಳನ್ನು ಕಾಂಗ್ರೆಸ್‍ಗೆ ತಿರುಗುಬಾಣವಾಗಿ ನೀಡಲು ಮುಂದಾಗಿದೆ