22 ನಿಮಿಷದ ವಿಡಿಯೋದಲ್ಲಿ ಸ್ಫೋಟಕ ಮಾಹಿತಿ ಹೊರಹಾಕಿದ ಜಾರಕಿಹೊಳಿ

ಬೆಳಗಾವಿ, ನ 9: ಬೆಂಗಳೂರಿನ ನಂತರ ಅತಿಹೆಚ್ಚು ವಿಧಾನಸಭಾ ಕ್ಷೇತ್ರವನ್ನು ಹೊಂದಿರುವ ಬೆಳಗಾವಿ ಜಿಲ್ಲೆ, ರಾಜ್ಯ ರಾಜಕಾರಣದ ದಿಕ್ಸೂಚಿ ಬರೆಯುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಅದಕ್ಕೆ ಕೊಡಬಹುದಾದ ಉದಾಹರಣೆಯಲ್ಲೊಂದು ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಪತನಗೊಂಡಿದ್ದದ್ದು.
ರಾಜ್ಯ ರಾಜಕಾರಣದ ಪ್ರಭಾವೀ ಕುಟುಂಬಗಳಲ್ಲೊಂದು ಜಾರಕಿಹೊಳಿ ಫ್ಯಾಮಿಲಿ.
ಇಬ್ಬರು ಜೆಡಿಎಸ್ ಶಾಸಕರು ಬಿಜೆಪಿಯತ್ತ: 'ಐ ಡೋಂಟ್ ಕೇರ್' ಎಂದ ಎಚ್‌ಡಿಕೆ
ಮೇಲಿನ ಪೀಠಿಕೆ ಏನಕ್ಕೆ ಅಂದರೆ, ಉತ್ತಮ ವಾಗ್ಮಿಯಲ್ಲದ ಕೆಪಿಸಿಸಿ ಕಾರ್ಯಾಧ್ಯಕ್ಷರಲ್ಲಿ ಒಬ್ಬರಾದ ಸತೀಶ್ ಜಾರಕಿಹೊಳಿ, ತಿಂಗಳಿನಿಂದ ಮನಸ್ಸಿನಲ್ಲಿದ್ದ ನೋವನ್ನೆಲ್ಲಾ ವಿಡಿಯೋ ಮೂಲಕ ಹೊರಗೆಡವಿದ್ದಾರೆ.
ಕುಗ್ಗುತ್ತಿದ್ದ ಜನಪ್ರಿಯತೆಯನ್ನು ಮತ್ತೆ ಬಾಚಿಕೊಂಡ ಪ್ರಧಾನಿ ಮೋದಿ: ವಿಶ್ವದಲ್ಲೇ ನಂಬರ್ 1
ಬೆಳಗಾವಿ ಮಹಾನಗರಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದು ಹೇಗೆ, ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಕೂದಲೆಳೆ ಅಂತರದಿಂದ ಕಾಂಗ್ರೆಸ್ ಸೋತಿದ್ದು ಯಾಕೆ ಎನ್ನುವುದನ್ನು ಸತೀಶ್ ಜಾರಕಿಹೊಳಿ ಇಂಚಿಂಚು ವಿವರಿಸಿದ್ದಾರೆ. ಗಮನಿಸಬೇಕಾದ ವಿಚಾರ ಏನಂದರೆ, ಕಾಂಗ್ರೆಸ್ ಸೋಲಿಗೆ ಬಿಜೆಪಿ ಕಾರಣವಲ್ಲ, ನಮ್ಮವರೇ ಎನ್ನುವ ಅವರ ಸ್ಪೋಟಕ ಹೇಳಿಕೆ. ಹಾಗಾದರೆ, ಯಾರದು?