ಆಲಮಟ್ಟಿ- ಬಾಗಲಕೋಟೆ ಮಧ್ಯೆ ಜಲಸಾರಿಗೆಗೆ ಕೇಂದ್ರ ಒಪ್ಪಿಗೆ

ಆಲಮಟ್ಟಿ- ಬಾಗಲಕೋಟೆ ಮಧ್ಯೆ ಜಲಸಾರಿಗೆಗೆ ಕೇಂದ್ರ ಒಪ್ಪಿಗೆ

ಆಲಮಟ್ಟಿಯ ಲಾಲ್‌ ಬಹಾದ್ದೂರ ಶಾಸ್ತ್ರೀ ಜಲಾಶಯದ ಹಿನ್ನೀರಿನಿಂದ ಬಾಗಲಕೋಟೆಯ ನಡುವೆ ಕೃಷ್ಣಾ ನದಿಯಲ್ಲಿ ಜಲಸಾರಿಗೆ ಆರಂಭಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಮೂಲಭೂತ ಸೌಕರ್ಯ ಕಲ್ಪಿಸಲು 12 ಕೋಟಿ ರೂ. ಕಾಮಗಾರಿಗೆ ಟೆಂಡರ್‌ ಕರೆಯಲಾಗಿದೆ. ಮೊದಲ ಹಂತದಲ್ಲಿ ಆಲಮಟ್ಟಿಯಿಂದ ಬೀಳಗಿ ತಾಲೂಕಿನ ಹೆರಕಲ್‌ವರೆಗೆ ಕೃಷ್ಣಾ ನದಿಯಲ್ಲಿ 25 ಕಿ.ಮೀ.ವರೆಗೆ ಹಾಗೂ ಎರಡನೇ ಹಂತದಲ್ಲಿ ಹೆರಕಲ್‌ ಮತ್ತು ಬಾಗಲಕೋಟೆಯ ಘಟಪ್ರಭಾ ನದಿಯಲ್ಲಿ 6 ಕಿ. ಮೀ. ಜಲಸಾರಿಗೆಗೆ ಉದ್ದೇಶಿಸಲಾಗಿದೆ.