ಸಲ್ಲಾರ್ ಪುರಿಯಾ ಸತ್ವ ಗ್ರೂಪ್ಸ್ MD ಬಿಜಯ್ ಅಗರ್ವಾಲ್ ಮನೆ ಹಾಗೂ ಕಚೇರಿ ಮೇಲೆ ಇಡಿ ದಾಳಿ..!

ಸಲ್ಲಾರ್ ಪುರಿಯಾ ಸತ್ವ ಗ್ರೂಪ್ಸ್ MD ಬಿಜಯ್ ಅಗರ್ವಾಲ್ ಮನೆ ಹಾಗೂ ಕಚೇರಿ ಮೇಲೆ ಇಡಿ ದಾಳಿ..!

ಬೆಂಗಳೂರು: ಸಲ್ಲಾರ್ ಪುರಿಯಾ ಸತ್ವ ಗ್ರೂಪ್ಸ್ ಎಂಡಿ ಬಿಜಯ್ ಅಗರ್ವಾಲ್ ಮನೆ ಹಾಗೂ ಕಚೇರಿ ಮೇಲೆ ಇಡಿ ದಾಳಿ ಮಾಡಿದೆ.

ಬೆಂಗಳೂರಿನ ಇಂದಿರಾನಗರ ಹಾಗೂ ಹಲಸೂರು ಭಾಗದಲ್ಲಿ ದಾಳಿ ನಡೆಸಲಾಗಿದ್ದು, ಇಂದಿರಾನಗರದ ಡಿಫೆನ್ಸ್ ಕಾಲೋನಿಯಲ್ಲಿರುವ ಮನೆ ಹಾಗೂ ಹಲಸೂರು ಯಲ್ಲಪ್ಪ ಚೆಟ್ಟಿ ಲೇಔಟ್ ಬಳಿಯ ಕಚೇರಿಯ ಮೇಲೆ ರೇಡ್​ ಮಾಡಲಾಗಿದೆ.

ಇಂದು ಬೆಳಿಗ್ಗಿನಿಂದ ಕೆಲ ಕಡತಗಳ ಹುಡುಕಾಟದಲ್ಲಿ ಇಡಿ ಬ್ಯುಸಿಯಾಗಿದೆ.

ಜಾರಿ ನಿರ್ದೇಶನಾಲಯದ 30 ಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಳಿ ಮಾಡಲಾಗಿದ್ದು, ಸತತ 10 ಗಂಟೆಯಿಂದ ಕಡತಗಳ ಪರಿಶೀಲನೆ ನಡೆಸಲಾಗುತ್ತಿದೆ. ಹಲವು ಅಪಾರ್ಟ್‌ಮೆಂಟ್ ಇನ್ವೆಸ್ಟ್ ಲೆಕ್ಕಾಚಾರವನ್ನ ತಡಕಾಡೋಕೆ ಇಡಿ ರೆಡಿಯಾಗಿದ್ದಾರೆ. ಸ್ಲಿಪಿಂಗ್ ಪಾರ್ಟ್ನರ್ ಗಳ ಬಗೆಗೂ ಮಾಹಿತಿ ಕಲೆಹಾಕ್ತಿರೋ ಇಡಿ, ವಿದೇಶಿ ಹೂಡಿಕೆಯ ಬಗ್ಗೆಯೂ ಪರಿಶೀಲನೆ ನಡೆಸುತ್ತಿದೆ.