ರಾಜ್ಯದಲ್ಲಿ ಹೆಚ್ಚಿದ ಆತಂಕ : ಒಂದೇ ವಾರದಲ್ಲಿ 293 ಡೆಂಘೀ ಪ್ರಕರಣ ಪತ್ತೆ, ಈ ಲಕ್ಷಣಗಳಿದ್ದರೆ ನಿರ್ಲಕ್ಷ ಬೇಡ

ರಾಜ್ಯದಲ್ಲಿ ಹೆಚ್ಚಿದ ಆತಂಕ : ಒಂದೇ ವಾರದಲ್ಲಿ 293 ಡೆಂಘೀ ಪ್ರಕರಣ ಪತ್ತೆ, ಈ ಲಕ್ಷಣಗಳಿದ್ದರೆ ನಿರ್ಲಕ್ಷ ಬೇಡ

ಬೆಂಗಳೂರು: ಕರೋನ ಸಾಂಕ್ರಾಮಿಕ ರೋಗದ ಅಬ್ಬರದ ನಡುವೆ ರಾಜ್ಯದಲ್ಲಿ ಡೆಂಘೀ ಪ್ರಕರಣಗಳು ಕೂಡ ಹೆಚ್ಚಾಗುತ್ತಿದ್ದು, ಜನತೆಯಲ್ಲಿ ಆತಂಕದ ವಾತವಾರಣವನ್ನು ನಿರ್ಮಾಣ ಮಾಡುತ್ತಿದೆ. ಅಂದ ಹಾಗೇ ರಾಜ್ಯದಲ್ಲಿ ಒಂದು ವಾರದಲ್ಲಿ 293 ಡೆಂಘೀ ಪ್ರಕರಣ ಪತ್ತೆಯಾಗಿದೆ ಅಂತ ಆರೋಗ್ಯ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಬೆಂಗಳೂರು- 540,ಕಲಬುರಗಿ- 321, ಉಡುಪಿ- 312, ಶಿವಮೊಗ್ಗ- 260, ದಕ್ಷಿಣ ಕನ್ನಡ- 192, ಕೊಪ್ಪಳದಲ್ಲಿ -175 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಘೀ ಪ್ರಕರಣಗಳ ಸಂಖ್ಯೆ 3,572ಕ್ಕೆ ಹೆಚ್ಚಳ ಕಂಡಿದೆ.

ವಿಪರೀತ ಚಳಿ ಹಾಗೂ ಜ್ವರದಿಂದ ಆರಂಭವಾಗುವ ಡೆಂಗ್ಯೂ ಜ್ವರ ಸೋಂಕಿತ ವ್ಯಕ್ತಿಯಿಂದ ಬೇರೊಬ್ಬರಿಗೆ ಗಾಳಿಯ ಮೂಲಕ ಹರಡುತ್ತದೆ. ಬೆಳಗ್ಗೆ ಈಡಿಸ್ ಎಂಬ ಸೊಳ್ಳೆಯಿಂದ ಹರಡುವ ಡೆಂಗ್ಯೂ ನಮ್ಮ ದೇಹದೊಳಗೆ ಸೇರಿಕೊಳ್ಳುತ್ತಿದ್ದಂತೆ ಬಳಿ ರಕ್ತ ಕಣಗಳು ಕಡಿಮೆಯಾಗುತ್ತವೆ ಇದರಿಂದ ರೋಗ ಹರಡುತ್ತದೆ ಎಂದು ಹೇಳಿದ್ದಾರೆ.

ಡೆಂಗ್ಯೂ ಜ್ವರದ ರೋಗ ಲಕ್ಷಣಗಳು

1) ತೀವ್ರ ಜ್ವರ

2) ಸಂದು ನೋವು

3) ವಿಪರೀತ ತಲೆನೋವು

4) ತಲೆಸುತ್ತು

5) ವಾಂತಿ

6) ವಿಪರೀತ ಚಳಿ

7) ಮೈಯಲ್ಲಿ ಗುಳ್ಳೆ

8) ಬಿಟ್ಟು ಬಿಡದೇ ಜ್ವರ ಕಾಣಿಸಿಕೊಳ್ಳುವುದು

ಡೆಂಗ್ಯೂ ಹೇಗೆ ಹರಡುತ್ತದೆ

ಈಡಿಸ್ ಸೊಳ್ಳೆ ಹಳೆಯ ಟೈರ್, ಹಳೆಯ ಎಣ್ಣೆಯ ಡ್ರಮ್, ನೀರು ಸಂಗ್ರಹಿಸುವ ತೊಟ್ಟಿಗಳಲ್ಲಿ ಉತ್ಪತ್ತಿಯಾಗುತ್ತವೆ. ಆದ್ದರಿಂದಲೇ ಮಳೆಗಾಲದಲ್ಲಿ ಸೋಂಕು ಹೆಚ್ಚಾಗಿ ಹರಡುತ್ತವೆ. ಆದ್ದರಿಂದ ಇವುಗಳನ್ನು ಶುಚಿಗೊಳಿಸಿ ಸೊಳ್ಳೆ ಮೊಟ್ಟೆ ಇಡಲು ಅವಕಾಶವಿರದಂತೆ ನೋಡಿಕೊಳ್ಳಬೇಕು. ಇದರಿಂದ ಡೆಂಗ್ಯೂ ಹರಡುವುದನ್ನು ತಪ್ಪಿಸಬಹುದು. ಡೆಂಗ್ಯೂ ಬಂದಾಗ ಹೆಚ್ಚಿನ ವಿಶ್ರಾಂತಿ ತೆಗೆದುಕೊಳ್ಳಿ ಜ್ವರಕ್ಕೆ ಔಷಧವಾಗಿ ಪ್ಯಾರಸಿಟಮಾಲ್ ಬಳಸಿ. ಆದರೂ ಜ್ವರ ಕಡಿಮೆಯಾಗದಿದ್ದರೆ ಒದ್ದೆ ಬಟ್ಟೆಯಲ್ಲಿ ದೇಹವನ್ನು ಒರೆಸಿ. ದ್ರವ ಪದಾರ್ಥಗಳನ್ನೇ ಹೆಚ್ಚು ಸೇವಿಸಿ.