ಉರಿಗೌಡ, ದೊಡ್ಡ ನಂಜೇಗೌಡ ಕುರಿತು ಸಿನಿಮಾ ಮಾಡಲ್ಲ : ಸಚಿವ ಮುನಿರತ್ನ ಯೂಟರ್ನ್

ಬೆಂಗಳೂರು : ಉರಿಗೌಡ, ದೊಡ್ಡ ನಂಜೇಗೌಡ ಸಿನಿಮಾ ನಿರ್ಮಾಣದ ಕುರಿತಂತೆ ಮುನಿರತ್ನ ಯೂಟರ್ನ್ ಹೊಡೆದಿದ್ದು, ಉರಿಗೌಡ, ದೊಡ್ಡ ನಂಜೇಗೌಡ ಕುರಿತ ಸಿನಿಮಾ ಮಾಡಲ್ಲ ಎಂದು ಹೇಳಿದ್ದಾರೆ.
ನಿರ್ಮಲಾನಂದ ಸ್ವಾಮೀಜಿಗಳ ಭೇಟಿ ಬಳಿಕ ಮಾತನಾಡಿದ ಮುನಿರತ್ನ ಅವರು, ಉರಿಗೌಡ, ದೊಡ್ಡ ನಂಜೇಗೌಡ ಕುರಿತ ಸಿನಿಮಾ ನಿರ್ಮಾಣ ಮಾಡಲ್ಲ ಎಂದು ಹೇಳುವ ಮೂಲಕ ವಿವಾದಿತ ಚಲನಚಿತ್ರ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಉರಿಗೌಡ, ನಂಜೇಗೌಡ ಸಿನಿಮಾ ನಿರ್ಮಾಣ ವಿಚಾರ ರಾಜಕೀಯ ಗದ್ದಲಕ್ಕೆ ಕಾರಣವಾದ ಬೆನ್ನಲ್ಲೆ ನಿರ್ಮಾಪಕ, ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ ಉರಿಗೌಡ-ನಂಜೇಗೌಡ ಪಾತ್ರಗಳನ್ನು ಪ್ರಧಾನವಾಗಿರಿಸಿ ಅದೇ ಹೆಸರಲ್ಲಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದರು. ಸಿನಿಮಾದ ಮುಹೂರ್ತ ದಿನಾಂಕವನ್ನು ಘೋಷಿಸಿದ್ದರು. ಆದರೆ ನಿರ್ಮಲಾನಂದ ಸ್ವಾಮೀಜಿಗಳ ಭೇಟಿ ಬಳಿಕ ಸಿನಿಮಾ ನಿರ್ಮಾಣ ಮಾಡಲ್ಲ ಎಂದು ಹೇಳಿದ್ದಾರೆ.