ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಸಂಸದೆ ಸುಮಲತಾ ಸುಳಿವು.

ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಸಂಸದೆ ಸುಮಲತಾ ಸುಳಿವು.

ಮಂಡ್ಯ: ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಸಂಸದೆ ಸುಮಲತಾ ಸುಳಿವು ನೀಡಿದ್ದು, ಎಲ್ಲ ತೀರ್ಮಾನ ಆದಾಗ ನಾನೇ ಘೋಷಿಸುತ್ತೇನೆ ಎಂದು ಹೇಳಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸುಮಲತಾ ನನ್ನನ್ನು ಹಾಗೂ ಅಭಿಷೇಕ್ ಅವರನ್ನು ರಾಜ್ಯ ರಾಜಕೀಯಕ್ಕೆ ಬನ್ನಿ ಎಂದು ಬೆಂಬಲಿಗರು ಕರೆಯುತ್ತಿದ್ದಾರೆ.

ಆದರೆ ಈ ವಿಚಾರವಾಗಿ ಇನ್ನೂ ಏನೂ ಕೂಡ ನಿರ್ಧರಿಸಿಲ್ಲ. ಯಾವುದೇ ಸಭೆ ಕೂಡ ನಡೆಸಿಲ್ಲ, ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ ಎಂದಿದ್ದಾರೆ.

ಜಿಲ್ಲೆಯ ಅಭಿವೃದ್ದಿ ನೋಡಿಕೊಂಡು ಪಕ್ಷ ಸೇರ್ಪಡೆ ವಿಚಾರದ ಬಗ್ಗೆ ಯೋಚನೆ ಮಾಡುತ್ತೇನೆ, ಬೆಂಬಲಿಗರು ಅವರವರು ಮಾತ್ರ ಚರ್ಚೆ ಮಾಡುತ್ತಿದ್ದಾರೆ, ನಾನು ಇದುವರೆಗೆ ಯಾವುದೇ ಸಭೆಗೆ ಭಾಗಿಯಾಗಿಲ್ಲ, ಎಲ್ಲ ತೀರ್ಮಾನ ಆದಾಗ ನಾನೇ ಘೋಷಿಸುತ್ತೇನೆ ಎಂದು ಹೇಳಿದ್ದಾರೆ.