ದಕ್ಷಿಣ ಕನ್ನಡದಲ್ಲಿ ಮತ್ತೆ ಮಾರಲ್ ಪೊಲೀಸಿಂಗ್

ದಕ್ಷಿಣ ಕನ್ನಡದಲ್ಲಿ ಮತ್ತೆ ಮಾರಲ್ ಪೊಲೀಸಿಂಗ್

ಮಂಗಳೂರು,ಸೆ.2-ಅನ್ಯ ಧರ್ಮಕ್ಕೆ ಸೇರಿದ ಸ್ನೇಹಿತೆಯನ್ನು ಭೇಟಿಯಾಗಲು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ್ದ ರಾಯಚೂರು ಮೂಲದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದ ಮೇಲೆ ಐದು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸಾಮಾಜಿಕ ಜಾಲತಾಣದ ಮೂಲಕ ಪುತ್ತೂರು ಮೂಲದ ಯುವತಿಯನ್ನು ಪರಿಚಯಿಸಿಕೊಂಡಿದ್ದ ರಾಯಚೂರಿನ ಯುವಕ ನಿನ್ನೆ ಯುವತಿಯನ್ನು ಭೇಟಿ ಮಾಡಲು ಪುತ್ತೂರಿಗೆ ಬಂದಿದ್ದ. ತನ್ನ ಸ್ನೇಹಿತನೊಂದಿಗೆ ಬಸ್‍ನಲ್ಲಿ ಪುತ್ತೂರಿಗೆ ಬಂದಿದ್ದ ಯುವಕ ಅಲ್ಲಿನ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಭೇಟಿಯಾಗಿ ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ಬಂದ ಐದು ಮಂದಿ ಯುವಕನ ಬಳಿ ತೆರಳಿ ಅನ್ಯ ಕೋಮಿನ ಯುವತಿಯೊಂದಿಗೆ ನಿನ್ನ ಮಾತುಕತೆ ಏನು ಎಂದು ತಗಾದೆ ತೆಗೆದರು. ಮಾತಿಗೆ ಮಾತು ಬೆಳೆದಾಗ ಐದು ಮಂದಿ ಯುವಕನ ಮೇಲೆ ಹಲ್ಲೆ ನಡೆಸಿ ಪರಾರಿಯಾದರು. ಈ ಕುರಿತಂತೆ ಯುವಕ ನೀಡಿದ ದೂರು ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಕಾರ್ಯಚರಣೆ ನಡೆಸಲಾಗುತ್ತಿದೆ.