ಬೆಳ್ತಂಗಡಿಯಲ್ಲಿ ನದಿಯ ಸೇತುವೆ ಬಳಿ ಒಂಟಿ ಸಲಗ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ

ಬೆಳ್ತಂಗಡಿಯಲ್ಲಿ ನದಿಯ ಸೇತುವೆ ಬಳಿ ಒಂಟಿ ಸಲಗ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ

ಮಂಗಳೂರು: ಜಿಲ್ಲೆಯ ಬೆಳ್ತಂಗಡಿಯ ಅಣಿಯೂರು ನದಿಯ ಸೇತುವೆಯ ಕೆಳಭಾಗದಲ್ಲಿ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿದೆ. ಹೀಗಾಗಿ ನದಿಯ ಸೇತುವೆಯ ಕೆಳಭಾಗದಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಸ್ಥಳೀಯರು ನೋಡಿದ್ದಾಅಲ್ಲದೇ ಆನೆಯ ವಿಡಿಯೋವನ್ನು ಚಿತ್ರೀಕರಣ ಮಾಡಿದ್ದಾರೆ‌. ಚಾರ್ಮಾಡಿ, ನೆರಿಯ ಸೇರಿದಂತೆ ತಾಲೂಕಿನ ಹಲವೆಡೆ ಆನೆಗಳು ಕೃಷಿ ತೋಟಕ್ಕೆ ನುಗ್ಗಿ ಹಾನಿ ಮಾಡುತ್ತಿವೆ. ಈ ನಡುವೆ ಪೇಟೆಯಲ್ಲಿ ಆನೆ ಕಂಡುಬಂದಿದ್ದು, ಮತ್ತಷ್ಟು ಭಯವುಂಟು ಮಾಡಿದೆ. ತಕ್ಷಣ ಅರಣ್ಯ ಇಲಾಖೆ ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಕೂಡಲೇ ಅರಣ್ಯಾಧಿಕಾರಿ ಕಾಡಾನೆ ಸೆರೆ ಹಿಡಿಯುವ ಭರವಸೆ ನೀಡಿದ್ದಾರೆ.ರೆ.