'ಸಿಎಂ ಅಂಕಲ್‌, ಬಸ್‌ ವ್ಯವಸ್ಥೆ ಮಾಡದಿದ್ದರೆ ನಾಳೆಯಿಂದ ಶಾಲೆಗೆ ಹೋಗಲ್ಲ'

'ಸಿಎಂ ಅಂಕಲ್‌, ಬಸ್‌ ವ್ಯವಸ್ಥೆ ಮಾಡದಿದ್ದರೆ ನಾಳೆಯಿಂದ ಶಾಲೆಗೆ ಹೋಗಲ್ಲ'

ಚಾಮರಾಜನಗರ: ನಾಳೆಯಿಂದ ಅರೆಕಾಡುವಿನ ದೊಡ್ಡಿ ಗ್ರಾಮಕ್ಕೆ KSRTC ಬಸ್‌ ಬಾರದಿದ್ದರೆ ನಾವು ಶಾಲೆಗೆ ಹೋಗುವುದಿಲ್ಲ ಸಿಎಂ ಅಂಕಲ್‌‌‌ ಎಂದು ಹನೂರು ತಾ| ವ್ಯಾಪ್ತಿಯ ಶಾಲಾ ಮಕ್ಕಳು ಪಟ್ಟು ಹಿಡಿದಿದ್ದಾರೆ. ವಿದ್ಯಾರ್ಥಿಗಳು ಸಮರ್ಪಕ ಬಸ್‌ ವ್ಯವಸ್ಥೆ ಕಲ್ಪಿಸುವಂತೆ ಪ್ರತಿಭಟನೆ ನಡೆಸಿದ್ದರು. ಈ ಬಗ್ಗೆ ಶಾಸಕರು ಜಿಲ್ಲಾ ವಿಭಾಗೀಯ ನಿಯಂತ್ರಣ ಅಧಿಕಾರಿಗಳಲ್ಲಿ ಮಾತನಾಡಿದ್ದರು. ಆದರೆ, ಯಾವುದೇ ಪ್ರತಿಕ್ರಿಯೆ ಬಾರದ ಕಾರಣ 40 ವಿದ್ಯಾರ್ಥಿಗಳು ಶಾಲೆಗೆ ಹೋಗದಿರಲು ತೀರ್ಮಾನಿಸಿದ್ದಾರೆ.