ಹಳೇ ದ್ವೇಷಕ್ಕೆ ರೌಡಿ ಬಾಂಬೆ ಸಲೀಂ ರಿಯಲ್ ಎಸ್ಟೇಟ್ ಉದ್ಯಮಿಗೆ ಸುಪಾರಿ ಕೊಟ್ನಾ..? ಉದ್ಯಮಿಯನ್ನ ಮುಗಿಸೋಕೆ ಆ ಗ್ಯಾಂಗ್ ಬಂದಿತ್ತಾ

ಹಳೇ ದ್ವೇಷಕ್ಕೆ ರೌಡಿ ಬಾಂಬೆ ಸಲೀಂ ರಿಯಲ್ ಎಸ್ಟೇಟ್ ಉದ್ಯಮಿಗೆ ಸುಪಾರಿ ಕೊಟ್ನಾ..? ಉದ್ಯಮಿಯನ್ನ ಮುಗಿಸೋಕೆ ಆ ಗ್ಯಾಂಗ್ ಬಂದಿತ್ತಾ

ಬೆಂಗಳೂರು : ಯಲ್ ಎಸ್ಟೇಟ್ ಉದ್ಯಮಿ‌ ಮುಯೀಜ್ ಅಹಮ್ಮದ್ ಕಲಾಸಿಪಾಳ್ಯ ಪೊಲೀಸ್ರ ಮೊರೆಹೋಗಿದ್ದು, ಹಳೇ ದ್ವೇಷಕ್ಕೆ ರೌಡಿ ಬಾಂಬೆ ಸಲೀಂ ರಿಯಲ್ ಎಸ್ಟೇಟ್ ಉದ್ಯಮಿಗೆ ಸುಪಾರಿ ಕೊಟ್ನಾ..? ಉದ್ಯಮಿಯನ್ನ ಮುಗಿಸೋಕೆ ಆ ಗ್ಯಾಂಗ್ ಬಂದಿತ್ತಾ..

ಈ ಹಿಂದೆ ಬಾಂಬೆ ಸಲೀಂ 8 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದು, ಜೈಲಿನಲ್ಲೇ ಕೂತು ಸಹಚರರಾದ ಅಲಿ ಹಾಗೂ ಜಾಫರ್ ನನ್ನ ಬಾಂಬೇ ಸಲೀಂ ಕಳುಹಿಸಿ ಹಫ್ತಾ ವಸೂಲಿಗೆ ಮುಂದಾಗಿದ್ದ ಹೀಗಾಗಿ, ಈ ಸಂಬಂಧ ಸಿಸಿಬಿ ಪೊಲೀಸರು ಬಾಂಬೆ ಸಲೀಂನ ಸಮೇತ 8 ಮಂದಿ ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಆದರೆ ಇದೀಗ ಮತ್ತೆ ಬಾಂಬೆ ಸಲೀಂ, ರಿಯಲ್ ಎಸ್ಟೇಟ್ ಉದ್ಯಮಿಯನ್ನ ಟಾರ್ಗೆಟ್ ಮಾಡಿದ್ದಾನಂತೆ. ಚನ್ನಪಟ್ಟಣದಿಂದ ಕಾರಿನಲ್ಲಿ ಬೆಂಗಳೂರಿನ ರುದ್ರಪ್ಪ ಗಾರ್ಡನ್ ಗೆ ಮುಯೀಜ್ ಬರುತಿದ್ದರು, ಈ ವೇಳೆ ವಿಲ್ಸನ್ ಗಾರ್ಡನ್ ರೌಡಿ ಅಕ್ರಮ್ @ ಕ್ಯಾಪ್ಟನ್ ಟೀಂ ಬೈಕನ್ನ ಕಾರಿನ ಮುಂದೆ ನಿಲ್ಲಿಸಿ ತಗಾದೆ ತೆಗೆದಿದ್ದಾರೆ, ಸಣ್ಣಪುಟ್ಟ ವಿಚಾರವನ್ನ ತೆಗೆದು ಮುಯೀಜ್ ಗೆ ಟೀಂ ಹಲ್ಲೆ ನಡೆಸಿದೆ.

ಸುಪಾರಿ ಹಂತಕರು ಲೈಸೆನ್ಸ್ ರಿವಾಲ್ವಾರ್ ಮುಯೀಜ್ ಸೊಂಟದಲ್ಲಿರೋದನ್ನ ನೋಡಿ ಕಾಲ್ಕಿತ್ತಿದ್ದಾರೆ. ಕಲಾಸಿಪಾಳ್ಯ ಪೊಲೀಸರು ಇದೀಗ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರೋ ರೌಡಿಶೀಟರ್ ಅಕ್ರಮ್ @ ಕ್ಯಾಪ್ಟನ್ ಟೀಂಗಾಗಿ ಹುಡುಕಾಟ ನಡೆಸುತ್ತಿದೆ. ಮರ್ಡರ್ ಸ್ಕೆಚ್ ಗೆ ಬಂದ ಟೀಂನ ವೀಡಿಯೋ ವನ್ನು ಮುಯೀಜ್ ಮಾಡಿಟ್ಟುಕೊಂಡಿದ್ದಾರೆ.