ಗನ್ ಪ್ರದರ್ಶಿಸಿದ ಆರೋಪ : ಆಮ್ ಆದ್ಮಿ ಪಕ್ಷದ ಎಂಸಿಡಿ ಚುನಾವಣಾ ಅಭ್ಯರ್ಥಿ ವಿರುದ್ಧ ಪ್ರಕರಣ ದಾಖಲು

ಗನ್ ಪ್ರದರ್ಶಿಸಿದ ಆರೋಪ : ಆಮ್ ಆದ್ಮಿ ಪಕ್ಷದ ಎಂಸಿಡಿ ಚುನಾವಣಾ ಅಭ್ಯರ್ಥಿ ವಿರುದ್ಧ ಪ್ರಕರಣ ದಾಖಲು

ವದೆಹಲಿ: ಪಿಸ್ತೂಲ್ ಪ್ರದರ್ಶಿಸಿದ ಆರೋಪದ ಮೇಲೆ ಆಮ್ ಆದ್ಮಿ ಪಕ್ಷದ ಎಂಸಿಡಿ ಚುನಾವಣಾ ಅಭ್ಯರ್ಥಿ ಜೋಗಿಂದರ್ ಸಿಂಗ್ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಹಳದಿ ಟೀ ಶರ್ಟ್ ಧರಿಸಿ, ಪಿಸ್ತೂಲ್ ತೋರಿಸುತ್ತ ಕೆಲವರ ಜೊತೆ ಡ್ಯಾನ್ಸ್ ಮಾಡುತ್ತಿರುವ ಸಿಂಗ್ ಅವರ ವಿಡಿಯೋ ವೈರಲ್ ಆಗಿದ್ದು, ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವೈರಲ್ ವಿಡಿಯೋವನ್ನು ಸ್ವಯಂಪ್ರೇರಿತವಾಗಿ ಸ್ವೀಕರಿಸಿ, ಮಂಗಳವಾರ ಸಿಂಗ್ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸಿಂಗ್ ಅವರು ಆಮ್ ಆದ್ಮಿ ಪಕ್ಷದ ಎಂಸಿಡಿ ಚುನಾವಣಾ ಅಭ್ಯರ್ಥಿಯಾಗಿದ್ದು, ಅವರು ಸ್ವರೂಪ್ ನಗರದಿಂದ ಕಣಕ್ಕಿಳಿದಿದ್ದಾರೆ.

250 ವಾರ್ಡ್‌ಗಳ ಚುನಾವಣೆಯ ಡಿಸೆಂಬರ್ 4 ರಂದು ನಡೆಯಲಿದೆ. ಚುನಾವಣೆಯಲ್ಲಿ ಎಎಪಿ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.