ಇಂದು 44 ಶಿಕ್ಷಕರಿಗೆ 2021ನೇ ಸಾಲಿನ 'ರಾಷ್ಟ್ರ ಪ್ರಶಸ್ತಿ' ನೀಡಿದ ರಾಷ್ಟ್ರಪತಿ

ಇಂದು 44 ಶಿಕ್ಷಕರಿಗೆ 2021ನೇ ಸಾಲಿನ 'ರಾಷ್ಟ್ರ ಪ್ರಶಸ್ತಿ' ನೀಡಿದ ರಾಷ್ಟ್ರಪತಿ

ದೆಹಲಿ : ಶಿಕ್ಷಕರ ದಿನಾಚರಣೆ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದು 2021ನೇ ಸಾಲಿನ 44 ಶಿಕ್ಷಕರಿಗೆ ರಾಷ್ಟ್ರಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ರಾಜಸ್ಥಾನ, ಗುಜರಾತ್, ಉತ್ತರ ಪ್ರದೇಶ, ತೆಲಂಗಾಣ, ಸಿಕ್ಕಿಂ, ಮಹಾರಾಷ್ಟ್ರ, ಒಡಿಶಾ, ಆಂಧ್ರ ಪ್ರದೇಶ, ಬಿಹಾರ ಮತ್ತು ತಮಿಳುನಾಡು ಸೇರಿದಂತೆ 10 ವಿವಿಧ ರಾಜ್ಯಗಳ ತಲಾ ಇಬ್ಬರು ಶಿಕ್ಷಕರಿಗೆ ವರ್ಚ್ಯುವಲ್ ಸಮಾವೇಶದ ಮೂಲಕ ಕೋವಿಂದ್ ಅವರು ರಾಷ್ಟ್ರಪ್ರಶಸ್ತಿ ಪ್ರದಾನ ಮಾಡಿದದರು.

ಬಳಿಕ ಮಾತನಾಡಿದ ಅವರು, ಸರ್ವಪಲ್ಲಿ ರಾಧಾಕೃಷ್ಣನ್ ಅವರು ವಿಶ್ವಾದ್ಯಂತ ತ್ವಜ್ಞಾನಿ ಹಾಗೂ ವಿದ್ವಾಂಸರೆಂದೆ ಖ್ಯಾತಿ ಪಡೆದಿದ್ದರು. ಆದರೆ ಶಿಕ್ಷಕರಾಗಿಯೇ ಎಲ್ಲರ ನೆನಪಿನಲ್ಲಿ ಅಚ್ಚುಳಿಯಬೇಕೆಂದು ಬಯಸಿದ್ದರು. ಅದರಂತೆಯೇ ಎಲ್ಲರ ಮನದಲ್ಲಿಯೂ ಶ್ರೇಷ್ಠ ಶಿಕ್ಷಕರಾಗಿಯೇ ನೆನಪಿನಲ್ಲಿ ಉಳಿದಿದ್ದಾರೆ ಎಂದು ಹೇಳಿದರು.