ರೌಡಿಶೀಟರ್ 'ಸೈಲೆಂಟ್ ಸುನೀಲ' ಮತ್ತೆ ಆಯಕ್ಟೀವ್ : 'ಫೇಸ್ ಬುಕ್' ನಲ್ಲಿ ಫ್ಯಾನ್ಸ್ ಕ್ಲಬ್ ಪೇಜ್ ಓಪನ್

ರೌಡಿಶೀಟರ್ 'ಸೈಲೆಂಟ್ ಸುನೀಲ' ಮತ್ತೆ ಆಯಕ್ಟೀವ್ : 'ಫೇಸ್ ಬುಕ್' ನಲ್ಲಿ ಫ್ಯಾನ್ಸ್ ಕ್ಲಬ್ ಪೇಜ್ ಓಪನ್

ಬೆಂಗಳೂರು : ರಾಜ್ಯ ರಾಜಕೀಯ ನಾಯಕರ ಜೊತೆ ಕಾಣಿಸಿಕೊಂಡು ಸುದ್ದಿಯಾಗಿದ್ದ ನಟೊರಿಯಸ್ ರೌಡಿ ಶೀಟರ್ ಸೈಲೆಂಟ್ ಸುನೀಲ ಮತ್ತೆ ಸುದ್ದಿಯಾಗಿದ್ದಾನೆ.

ಬಿಜೆಪಿ ನಾಯಕರ ಜೊತೆ ವೇದಿಕೆ ಹಂಚಿಕೊಂಡು ಸುದ್ದಿಯಾಗಿದ್ದ ನಂತರ ಎಲ್ಲೂ ಕಾಣಿಸಿಕೊಂಡಿರಲಿಲ್ಲ.

ಇದೀಗ ಈತ ಫೇಸ್ ಬುಕ್ ಪೇಜ್ ನಲ್ಲಿ ಆಯಕ್ಟಿವ್ ಆಗಿದ್ದಾನೆ. 'ಏ ಸುನಿಲ್ ಕುಮಾರ್ ಫಾರ್ ಚಾಮರಾಜಪೇಟೆ' ಅಂತ ಫೇಸ್ ಬುಕ್ ಪೇಜ್ ಕೂಡ ಓಪನ್ ಮಾಡಿದ್ದು, ಮಾಹಿತಿ ನೀಡುವ ಕೆಲಸದಲ್ಲಿ ಬ್ಯುಸಿಯಾಗಿದ್ದಾನೆ.

ಈಗಾಗಲೇ ಚಾಮರಾಜಪೇಟೆಯ ವಿಧಾನಸಭಾ ಅಭ್ಯರ್ಥಿಯ ರೀತಿ ಈತ ಕೆಲಸ ಮಾಡ್ತಿದ್ದು, ಟಿಕೆಟ್ ಸಿಗದೇ ಇದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾನೆ ಎನ್ನಲಾಗಿದೆ. ಸುನೀಲ ಅಲಿಯಾಸ್ ಸೈಲೆಂಟ್ ಸುನೀಲ ಕೂಡ ಒಬ್ಬ ರೌಡಿ ಶೀಟರ್ ಆಗಿದ್ದು, ಸದ್ಯ ಬೆಂಗಳೂರಿನ ಪ್ರಕಾಶ ನಗರದ ನಿವಾಸಿಯಾಗಿರುವ ಸೈಲೆಂಟ್ ಸುನೀಲ ಮೂಲತಃ ಕೇರಳದವನು. ಹತ್ತನೇ ತರಗತಿ ಓದುವಾಗಲೇ 'ಬಾಲಾಪರಾಧಿ'ಯಾಗಿ ಜೈಲುವಾಸ ಅನುಭವಿಸಿದಾತ ಈ ಸೈಲೆಂಟ್ ಸುನೀಲ. ವಲ 20 ವರ್ಷದ ಆಸುಪಾಸಲ್ಲೇ ಈತನ ಮೇಲೆ ರೌಡಿಶೀಟ್ ತೆರೆಯಲಾಗಿತ್ತು.