ವಾಹನ ಚಾಲನೆ ಮಾಡುವಾಗ ಯಾವ ದಾಖಲೆಗಳನ್ನು ಕೊಂಡೊಯ್ಯಬೇಕು? ಗೃಹ ಸಚಿವರು ಹೇಳಿದ್ದು ಹೀಗೆ

ವಾಹನ ಚಾಲನೆ ಮಾಡುವಾಗ ಯಾವ ದಾಖಲೆಗಳನ್ನು ಕೊಂಡೊಯ್ಯಬೇಕು? ಗೃಹ ಸಚಿವರು ಹೇಳಿದ್ದು ಹೀಗೆ

ಬೆಂಗಳೂರು, ಫೆಬ್ರವರಿ. 14: ವಾಹನ ಚಾಲನೆ ಮಾಡುವಾಗ ಯಾವ ದಾಖಲೆಗಳನ್ನು ಕೊಂಡೊಯ್ಯಬೇಕು..? ಎಂಬುದು ಯಾವಾಗಲೂ ತಲೆ ಕೊರೆಯುವ ಪ್ರಶ್ನೆ. ಎಷ್ಟು ಬಾರಿ ಯಾರು ಏನೇ ಹೇಳಿದರೂ ಒಂದಲ್ಲ ಒಂದು ದಾಖಲೆಯನ್ನು ಮರೆತುಬಿಡುತ್ತೇವೆ.

ಸಂಚಾರಿ ಪೊಲೀಸರು ವಾಹನ ತಡೆದು ನಿಲ್ಲಿಸಿ ದಾಖಲೆಗಳನ್ನು ಕೇಳಿದಾಗ ಪರದಾಡುತ್ತೇವೆ.

ಹೀಗಾಗಿ ಸಚಿವರೇ ಈ ಬ್ಗಗೆ ಮಾಹಿತಿ ನೀಡಿಬಿಟ್ಟರೇ ಒಲ್ಲೆಯದಲ್ಲವೇ ಎಂದು ಅನಿಸಬಹುದು. ಅದಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ ಓದಿ.

ವಾಹನ ಚಾಲನೆ ಮಾಡುವಾಗ ಚಾಲಕರು ಯಾವ ದಾಖಲೆಗಳನ್ನು ಕೊಂಡೊಯ್ಯಬೇಕು..? ಎಂಬುದಕ್ಕೆ ಉತ್ತರಿಸಿರುವ ಅವರು, ವಾಹನ ಚಾಲನೆ ಮಾಡುವಾಗ ಈ ಕೆಳಕಂಡ ದಾಖಲೆಗಳನ್ನು ಕೊಂಯೊಯ್ಯಬೇಕು ಎಂದಿದ್ದಾರೆ.

1. ಚಾಲನಾ ಪರವಾನಗಿ

2. ನೋಂದಣಿ ಪ್ರಮಾಣ ಪತ್ರ

3. ಎಮಿಷನ್ ಟೆಸ್ಟ್ ಸರ್ಟಿಫಿಕೆಟ್/ ಪೊಲ್ಯೂಷನ್ ಅಂಡರ್ ಕಂಟ್ರೋಲ್ ಸರ್ಟಿಫಿಕೇಟ್

4. ವಿಮಾ ಪ್ರಮಾಣ ಪತ್ರ

5. ಸಾರಿಗೆ ವಾಹನಗಳ ಸಂದರ್ಭದಲ್ಲಿ ಫಿಟ್‌ನೆಸ್ ಪ್ರಮಾಣಪತ್ರ, ಪರವಾನಗಿ ಮತ್ತು ತೆರಿಗೆ ಪಾವತಿಸಿದ ಪ್ರಮಾಣ ಪತ್ರ

ಈ ದಾಖಲೆಗಳ ಅಸಲು ದಾಖಲೆಗಳನ್ನು ತೆಗೆದುಕೊಂಡು ಇಟ್ಟುಕೊಂಡಿರಬೇಕು ಅಥವಾ ಡಿಜಿಲಾಕರ್‌ನಲ್ಲಿ ಇಟ್ಟುಕೊಂಡಿರಬೇಕು. ಇದಲ್ಲದೆ ಎಂಪರಿವಾಹನ್ ಅಪ್ಲಿಕೇಷನ್‌ನಲ್ಲಿಯೂ ದಾಖಲೆಗಳನ್ನು ತೋರಿಸಬಹುದು.

ಇನ್ನು, ಇತ್ತಿಚೆಗೆ ಎಲ್ಲರೂ ಹೆಚ್ಚಾಗಿ ಡಿಜಿಲಾಕರ್ ಬಳಸುತ್ತಿದ್ದು, ದಾಖಲೆಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ ಹೆಚ್ಚಾಗಿ ವಾಹನ ಸವಾರರು ಮರೆಯುವುದು, ಎಮಿಷನ್ ಟೆಸ್ಟ್ ಮಾಡಿಸಿ ಅದರ ಸರ್ಟಿಫಿಕೇಟ್ ಪಡೆಯುವುದು. ಇದರ ಬಗ್ಗೆ ನಿರುತ್ಸಾಹವೋ ಅಥವಾ ಏನೂ ಆಗುವುದಿಲ್ಲ ಎಂಬ ಮೊಂಡು ಧೈರ್ಯವೋ ಹೆಚ್ಚಿನ ವಾಹನ ಚಾಲಕರು ಎಮಿಷನ್ ಟೆಸ್ಟ್ ಮಾಡಿಸುವುದಿಲ್ಲ. ಹೀಗಾಗಿ ಸಂಚಾರಿ ಪೊಲೀಸರ ಬಳಿ ಸಿಲುಕಿಹಾಕಿಕೊಂಡಿರುತ್ತಾರೆ.

ಇದರ ಜೊತೆಗೆ ವಿಮೆ ಕಟ್ಟುವುದು. ಕೊಲವೊಬ್ಬರು ಒಂದು ಬಾರಿ ವಿಮೆ ಮಾಡಿಸಿದ್ದರೇ ಮುಗಿಯಿತು ವರ್ಷ ವರ್ಷ ಅದನ್ನು ರಿನಿವಲ್ ಮಾಡಿಸುವ ಗೋಜಿಗೆ ಹೋಗುವುದೇ ಇಲ್ಲ.