ಎರಡನೇ ಡೋಸ್ ಪಡೆಯದಿದ್ರು ಕೈ ಸೇರಿದ ಪ್ರಮಾಣ ಪತ್ರ : ಎಲ್ಲಾ ಮಾಯಾ..

ಹುಬ್ಬಳ್ಳಿ: ಕೋವಿಡ್ ಬಂದಿದ್ದೆ ಬಂದಿದ್ದು, ಸರ್ಕಾರ ನಿರ್ವಹಣೆ ಜೊತೆಗೆ ಒಂದಿಲ್ಲೊಂದು ಎಡವಟ್ಟು ಮಾಡುತ್ತಲೇ ಬಂದಿದೆ. ಸರಕಾರದ ತಂತ್ರಾಂಶದಲ್ಲಿ ಎಡವಟ್ಟು ಮಾಡಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.
ಹೌದು.. ಲಸಿಕೆ ಪಡೆಯದಿದ್ದರೂ ಸರ್ಟಿಫಿಕೇಟ್ ದೊರೆಯುತ್ತದೆ. ಕೆಲವರಿಗೆ ಕೋವಿಡ್ ಲಸಿಕೆ ಪಡೆದರೂ ಪ್ರಮಾಣಪತ್ರ ಬಾರದಿರುವ ಪ್ರಕರಣಗಳಿವೆ. ಆದರೆ ಇಲ್ಲಿ ವ್ಯಕ್ತಿಯೊಬ್ಬರು ಇನ್ನೂ ಲಸಿಕೆ ಯನ್ನೇ ಹಾಕಿಸಿಕೊಂಡಿಲ್ಲ. ಆಗಲೇ ಅವರ ಹೆಸರಿನಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡ ಪ್ರಮಾಣ ಪತ್ರ ಬಂದಿದೆ.
2ನೇ ಡೋಸ್ ಪಡೆಯಲು ಹೋದಾಗ ಶಾಕ್ ಆಗಿದೆ. ಹುಬ್ಬಳ್ಳಿಯ ಮಂಟೂರು ರೋಡ್ ನಿವಾಸಿ ಎಂ.ಎಸ್.ಸುಂದರ ಜುಲೈ 30 2021ಕ್ಕೆ ಗಾಂಧಿವಾಡ ಲಸಿಕಾ ಕೇಂದ್ರದಲ್ಲಿ ಮೊದಲ ಡೋಸ್ ಲಸಿಕೆ ಪಡೆದಿದ್ದರು. 2 ನೇ ಡೋಸ್ ಅಕ್ಟೋಬರ್ನಲ್ಲಿ ದಿನಾಂಕ ನೀಡಲಾಗಿತ್ತು. ಅನಿವಾರ್ಯ ಕಾರಣಗಳಿಂದಾಗಿ ಹೋಗಲು ಸಾಧ್ಯವಾಗಿಲ್ಲ. ಅದಕ್ಕಾಗಿ ಮೊನ್ನೆ ಎರಡನೇ ಡೋಸ್ ಪಡೆಯಲು ರೈಲ್ವೆ ಆಸ್ಪತ್ರೆಗೆ ಹೋಗಿದ್ದಾರೆ. ಎರಡನೇ ಡೋಸ್ ಲಸಿಕೆ ಹಾಕುವಂತೆ ಸಿಬ್ಬಂದಿಗೆ ಮೊಬೈಲ್ ಮೆಸೇಜ್ ತೋರಿಸಿದ್ದಾರೆ. ಆಗ ವೈದ್ಯಕೀಯ ಸಿಬ್ಬಂದಿ ಅವರ ಮೊಬೈಲ್ ನಂಬರ್ ಕೋವಿಡ್ ತಂತ್ರಾಂಶ ದಲ್ಲಿ ಹಾಕುತ್ತಿದ್ದಂತೆ ನಿಮಗೆ ಈಗಾಗಲೇ ಎರಡನೇ ಡೋಸ್ ಆಗಿದೆ ಎಂದು ಹೇಳಿದ್ದಾರಲ್ಲದೇ, ಅವರ ಮೊಬೈಲ್ ಲ್ಲಿಯೇ ಪ್ರಮಾಣ ಪತ್ರ ಡೌನ್ಲೋಡ್ ಮಾಡಿ ತೋರಿಸಿದ್ದಾರೆ.
ಇದರಿಂದ ಸುಂದರ್ ಅವರಿಗೆ ಆಶ್ಚರ್ಯವಾಗಿದೆ. ನಾನು ಇನ್ನೂ ಎರಡನೇ ಡೋಸ್ ತೆಗೆದುಕೊಂಡಿಲ್ಲ. ಅದು ಹೇಗೆ ಪ್ರಮಾಣ ಪತ್ರ ಬರುತ್ತೆ ಎಂದು ಕೇಳಿದ್ದಾರೆ. ಲಸಿಕಾ ಕೇಂದ್ರದ ಸಿಬ್ಬಂದಿ ಅದು ಹೇಗೆ ಬಂದಿದೆ ನಮಗೆ ಗೊತ್ತಿಲ್ಲ. ನಿಮಗಂತೂ ಎರಡನೇ ಡೋಸ್ ಹಾಕಲು ಅವಕಾಶ ಇಲ್ಲ ಎಂದು ಹೇಳಿದ್ದಾರೆ. ನಂತರ ಸುಂದರ್ ಎರಡು ಡೋಸ್ ಹಾಕಿಸಿಕೊಂಡಿದ್ದರೇ ನಾನೇಕೆ ಮತ್ತೆ ಲಸಿಕೆ ತೆಗೆದುಕೊಳ್ಳಲು ಬರುತ್ತಿದ್ದೆ. ಸರಕಾರವಾಗಲಿ, ವೈದ್ಯರಾಗಲಿ ಮೂರನೇ ಡೋಸ್ಗೆ ಅವ ಕಾಶ ನೀಡಿದ್ದಾರೆಯೇ..? ನಾನೇಕೆ ಹೆಚ್ಚಿನ ಡೋಸ್ ಪಡೆಯಲಿ? ಎಂದು ಪ್ರಶ್ನಿಸಿದ್ದಾರೆ.