ಸರ್ಕಾರದ ವಿರುದ್ಧ ಅನ್ನದಾತರ ಆಕ್ರೋಶ | Dharwad |

ರೈತರು ಸೋಯಾಬಿನ್ ಬೆಳೆ ಹಿಡಿದು ತಾವು ಬೆಳೆಯುವಂತಹ ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಘೋಷಿಸುವಂತೆ ಅಗ್ರಹಿಸಿ ಇಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಭಾರತೀಯ ಕಿಸಾನ್ ಸಂಘದ ಧಾರವಾಡ ಜಿಲ್ಲಾಧ್ಯಕ್ಷ ವಿವೇಕ್ ಮೋರೆ ಮಾತನಾಡಿ, ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ ಬೇಕಾಗಿಲ್ಲ, ಲಾಭದಾಯಕ ಬೆಲೆ ನೀಡಬೇಕು. ಹೆಸರಿಗμÉ್ಟೀ ರೈತ ದೇಶದ ಬೆನ್ನುಲುಬು ಅಂತಿದಾರೆ ರೈತನಿಗೆ ಮೋಸ ಮಾಡಬೇಕು ಎಂದೇ ವ್ಯಾಪಾರಸ್ಥರು, ಅಧಿಕಾರಿಗಳು, ವ್ಯವಸ್ಥಿತವಾಗಿ ರೈತನನ್ನ ಕೊಲ್ಲೋ ಕೆಲಸ ಮಾಡ್ತಿದೆ ಎಂದು ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದರು ಎಂದರು. ಇದೆ ವೇಳೆ ಮಾಸ್ಕ್ ಹಾಕದ ಕೆಲ ರೈತರಿಗೂ ಮಾಸ್ಕ್ ಕೊಟ್ಟು ಪ್ರತಿಭಟನೆಯಲ್ಲಿ ಭಾಗಿಯಾಗುವಂತೆ ತಿಳಿಸಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಮರೆತು ಕಾರ್ಯಕ್ರಮ ನಡೆಸುವ ರಾಜಕಾರಣಿಗಳಿಗೆ ಮಾದರಿಯಾದರು.