ಚಲಿಸುತ್ತಿದ್ದ ರೈಲಿನಿಂದ ಬಿದ್ದು ಬಿಬಿಎಂಪಿ ಸೂಪರಿಟೆಂಡೆಂಟ್ ಇಂಜಿನಿಯರ್ ಸಾವು

ಚಲಿಸುತ್ತಿದ್ದ ರೈಲಿನಿಂದ ಬಿದ್ದು ಬಿಬಿಎಂಪಿ ಸೂಪರಿಟೆಂಡೆಂಟ್ ಇಂಜಿನಿಯರ್ ಸಾವು

ರೈಲಿನಿಂದ ಆಕಸ್ಮಿಕವಾಗಿ ಬಿದ್ದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸೂಪರಿಟೆಂಡೆಂಟ್ ಇಂಜಿನಿಯರ್ ಮೃತಪಟ್ಟ ಆಘಾತಕಾರಿ ಘಟನೆ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದೆ.

ಬಿಬಿಎಂಪಿಯ ಕೆಆರ್‌ಐಡಿಎಲ್ ವಿಭಾಗದ ಸೂಪರಿಂಟೆಂಡೆಂಟ್ ಇಂಜಿನಿಯರ್ ರಂಗರಾಜು ಎಸ್.ಎ.

(59) ಮೃತಪಟ್ಟವರು.

ಭಾನುವಾರ ರಾತ್ರಿ 11:30ರ ಸುಮಾರಿಗೆ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ಹುಬ್ಬಳ್ಳಿ-ಬೆಂಗಳೂರು ರೈಲಿನಿಂದ ಬರಬೇಕಿದ್ದ ಅವರು, ಬೆಳಗಾವಿ ಬೆಂಗಳೂರು ರೈಲಿಗೆ ಹತ್ತಿರುವುದು ಗೊತ್ತಾಗಿದೆ.

ಚಲಿಸುತ್ತಿರುವ ರೈಲಿನಿಂದ ಇಳಿಯುವ ಸಂದರ್ಭದಲ್ಲಿ ಪ್ಲಾಟ್ ಫಾರ್ಂ ನಲ್ಲಿ ಬಿದ್ದು ಸ್ಥಳದಲ್ಲಿ ಬಿಬಿಎಂಪಿಯ ಕೆಆರ್‌ಐಡಿಎಲ್ ವಿಭಾಗದ ಸೂಪರಿಂಟೆಂಡೆಂಟ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ರಂಗರಾಜು ಪತ್ನಿ, ಓರ್ವ ಪುತ್ರ,ಓರ್ವ ಪುತ್ರಿಯನ್ನು ಅಗಲಿದ್ದಾರೆ.