'ದಿ ಹಿಂದು' ಕಚೇರಿಯಲ್ಲಿ ಆಕಸ್ಮಿಕ ಬೆಂಕಿ ಅವಘಡ
ಇಂದು ಬೆಳಗಿನ ಜಾವ ' ದಿ ಹಿಂದು' ದಿನ ಪತ್ರಿಕೆ ಕಚೇರಿಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಆಗಮಿಸಿ ಬೆಂಕಿ ನಂದಿಸಿ ಹೆಚ್ಚಿನ ಹಾನಿಯಾಗುವುದನ್ನು ತಪ್ಪಿಸಿದ್ದಾರೆ. ಗೋಕುಲ ರಸ್ತೆ, ಗ್ರೀನ್ ಗಾರ್ಡನ್ ನಲ್ಲಿರುವ ಕಲ್ಬುರ್ಗಿ ಕಾಟ್ವೆ ಐಡೆಂಟಿಟಿ ಕಟ್ಟಡದ ಎರಡನೇ ಮಹಡಿಯಲ್ಲಿರುವ ಕಚೇರಿಯ ಒಳಗಡೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಕರ್ತವ್ಯದಲ್ಲಿದ್ದ ಸೆಕ್ಯುರಿಟಿ ಗಾರ್ಡ್ ತಕ್ಷಣ ತಮ್ಮ ಮೇಲ್ವಿಚಾರಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅವರು ಕರೆ ಮಾಡಿದ ಕೂಡಲೇ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.ಕಚೇರಿಯಲ್ಲಿದ್ದ ಕೆಲವು ಪೀಠೋಪಕರಣಗಳು, ಕಂಪ್ಯೂಟರ್, ಟಿವಿ, ಹವಾ ನಿಯಂತ್ರಣ ಘಟಕಗಳು, ಮತ್ತಿತರ ಉಪಕರಣಗಳು ಹಾಗು ಕೆಲವು ದಾಖಲೆಗಳು ಬೆಂಕಿಗೆ ಆಹುತಿಯಾಗಿವೆ. ಈ ಬೆಂಕಿಗೆ ಶಾರ್ಟ್ ಸರ್ಕಿಟ್ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಹಾನಿಯನ್ನು ಅಂದಾಜು ಮಾಡಲಾಗುತ್ತಿದೆ. ಸ್ಥಳಕ್ಕೆ ಗೋಕುಲ ರಸ್ತೆ ಪೊಲೀಸರು ಆಗಮಿಸಿ ಪರಿಶೀಲಿಣೆ ನಡೆಸಿದ್ದಾರೆ