ಹಳೇ ದಾಖಲೆಗಳು ಧೂಳಿಪಟ: 'ಕಬ್ಜ' 2 ದಿನಗಳ ಒಟ್ಟು ಕಲೆಕ್ಷನ್ ಘೋಷಿಸಿದ ಚಿತ್ರತಂಡ

ಬಾಕ್ಸಾಫೀಸ್‌ನಲ್ಲಿ ಆರ್. ಚಂದ್ರು 'ಕಬ್ಜ' ಆರ್ಭಟ ಮುಂದುವರೆದಿದೆ. ಫಸ್ಟ್ ವೀಕೆಂಡ್‌ನಲ್ಲಿ ಸಿನಿಮಾ ಸಖತ್ ಸೌಂಡ್ ಮಾಡ್ತಿದೆ. ಮೊದಲ ದಿನ ವಿಶ್ವದಾದ್ಯಂತ ಸಿನಿಮಾ 54 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. 2ನೇ ದಿನವೂ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದೆ.
ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿನಿಮಾ 4000ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ವಿಶ್ವದಾದ್ಯಂತ ರಿಲೀಸ್ ಆಗಿತ್ತು. ಮೊದಲ ದಿನವೇ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿತ್ತು. ಆರ್. ಚಂದ್ರು ನಿರ್ದೇಶನ, ಮೇಕಿಂಗ್, ತ್ರಿಮೂರ್ತಿಗಳ ಆರ್ಭಟವನ್ನು ಸಿನಿರಸಿಕರು ಸಖತ್ ಎಂಜಾಯ್ ಮಾಡುತ್ತಿದ್ಧಾರೆ. ಮೊದಲ ದಿನ ಸಿನಿಮಾ ವಿಶ್ವದಾದ್ಯಂತ 54 ಕೋಟಿ ರೂ. ಕಲೆಕ್ಷನ್ ಮಾಡಿತ್ತು. 2ನೇ ದಿನವೂ ಹೆಚ್ಚು ಕಮ್ಮಿ ಇದೇ ಮೊತ್ತವನ್ನು ಚಿತ್ರ ಕಲೆ ಹಾಕಿದೆ. ಒಟ್ಟಾರೆ ಸಿನಿಮಾ 2 ದಿನಕ್ಕೆ 100 ಕೋಟಿ ಕ್ಲಬ್ ಸೇರಿದೆ. ನಿಧಾನವಾಗಿ ಥಿಯೇಟರ್‌ಗಳ ಮುಂದೆ ಹೌಸ್‌ಫುಲ್ ಬೋರ್ಡ್ ಬೀಳುತ್ತಿದೆ.
'ಕಬ್ಜ' ಸಿನಿಮಾ ಘೋಷಣೆಯಾಗಿದ್ದ ದಿನದಿಂದಲೂ ನಿರ್ದೇಶಕ ಆರ್. ಚಂದ್ರು ಭರ್ಜರಿ ಪ್ರಚಾರ ಮಾಡುತ್ತಾ ಬಂದಿದ್ದರು. ಸುದೀಪ್, ಶಿವಣ್ಣನ ಎಂಟ್ರಿಯಿಂದ ಸಿನಿಮಾ ಮತ್ತಷ್ಟು ಕ್ರೇಜ್ ಹುಟ್ಟು ಹಾಕಿತ್ತು. ಇದೀಗ ಬಾಕ್ಸಾಫೀಸ್‌ನಲ್ಲಿ 'ಕಬ್ಜ' ಸಿನಿಮಾ ಹಳೇ ದಾಖಲೆಗಳ ಬೇಟೆ ಶುರುಮಾಡಿದೆ.
ಮೊದಲ ದಿನವೇ 54 ಕೋಟಿ ರೂ. ಕಲೆಕ್ಷನ್ ಮಾಡಿದ್ದ 'ಕಬ್ಜ' ಸಿನಿಮಾ 2ನೇ ದಿನ 45 ಕೋಟಿಗೂ ಅಧಿಕ ಗಳಿಕೆ ಕಂಡಿದೆ. ಆ ಮೂಲಕ 2 ದಿನಕ್ಕೆ 100 ಕೋಟಿ ಕ್ಲಬ್ ಸೇರಿದೆ. ಈ ವಿಚಾರವನ್ನು ಸ್ವತ: ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ವಿಶ್ವದಾದ್ಯಂತ ಬಹಳ ದೊಡ್ಡಮಟ್ಟದಲ್ಲಿ 'ಕಬ್ಜ' ಸಿನಿಮಾ ಬಿಡುಗಡೆಯಾಗಿದೆ. ಮೊದಲ ದಿನ ಚಿತ್ರಕ್ಕೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕ ಬೆನ್ನಲ್ಲೇ 2ನೇ ದಿನ ಪ್ರೇಕ್ಷಕರು ದೊಡ್ಡಮಟ್ಟದಲ್ಲಿ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ತೆರೆಕಂಡಿದೆ.
ಕೇಕ್ ಕತ್ತರಿಸಿ ಸಂಭ್ರಮಿಸಿದ ತಂಡ
2 ದಿನಕ್ಕೆ ಸಿನಿಮಾ 100 ಕೋಟಿ ಕಲೆಕ್ಷನ್ ಮಾಡುತ್ತಿದ್ದಂತೆ ಚಿತ್ರತಂಡ ಕೇಕ್ ಕತ್ತರಿಸಿ ಸಂಭ್ರಮಿಸಿದೆ. 'ಕಬ್ಜ' ಚಿತ್ರದ ನಿರ್ಮಾಪಕ, ನಿರ್ದೇಶಕ ಆರ್. ಚಂದ್ರು, ಹೀರೊ ಉಪೇಂದ್ರ, ನಿರ್ಮಾಪಕರಾದ ಕೆ. ಪಿ ಶ್ರೀಕಾಂತ್ ಈ ಸಂಭ್ರಮದಲ್ಲಿ ಭಾಗಿ ಆಗಿದ್ದಾರೆ. ಇನ್ನು ನರ್ತಕಿ ಥಿಯೇಟರ್ ಮುಂದೆ ಹೌಸ್‌ಫುಲ್ ಬೋರ್ಡ್ ಬಿದ್ದಿದ್ದು ಇದನ್ನು ಚಂದ್ರು ಹಂಚಿಕೊಂಡಿದ್ದಾರೆ. ಇನ್ನು ಸಂಜೆ ನಗರದ ಖಾಸಗಿ ಹೋಟೆಲ್‌ನಲ್ಲಿ 'ಕಬ್ಜ' ಸಕ್ಸಸ್ ಮೀಟ್ ಕೂಡ ಹಮ್ಮಿಕೊಳ್ಳಲಾಗಿದೆ.
ಮೊದಲ ದಿನ 54 ಕೋಟಿ ಕಲೆಕ್ಷನ್
ಶುಕ್ರವಾರ ಸಿನಿಮಾ ಕರ್ನಾಟಕದಲ್ಲಿ 26 ಕೋಟಿ ರೂ. ಸೇರಿದಂತೆ ವಿಶ್ವದಾದ್ಯಂತ ಒಟ್ಟು 54 ಕೋಟಿ ರೂ. ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿತ್ತು. ದೊಡ್ಡ ದೊಡ್ಡ ಸ್ಟಾರ್‌ಗಳು ಒಂದೇ ಸಿನಿಮಾದಲ್ಲಿ ನಟಿಸಿದರೆ ದೊಡ್ಡಮಟ್ಟದಲ್ಲಿ ಮೇಕಿಂಗ್, ಪ್ರಮೋಷನ್, ರಿಲೀಸ್ ಮಾಡಿದರೆ ಪರಭಾಷಾ ಸಿನಿಮಾಗಳ ರೇಂಜಿಗೆ ಕನ್ನಡ ಸಿನಿಮಾಗಳು ಕೂಡ ಕಲೆಕ್ಷನ್ ಮಾಡಬಲ್ಲದು ಎಂದು 'ಕಬ್ಜ' ಮತ್ತೊಮ್ಮೆ ಸಾಬೀತು ಮಾಡಿತ್ತು. ಒಟ್ನಲ್ಲಿ ಫಸ್ಟ್ ವೀಕೆಂಡ್‌ನಲ್ಲೇ ಸಿನಿಮಾ ದಾಖಲೆ ಬರೆದಿದೆ.
'ಕಬ್ಜ' ಸೀಕ್ವೆಲ್‌ನಲ್ಲಿ ಪವನ್?ಈಗಾಗಲೇ 'ಕಬ್ಜ' ಚಿತ್ರವನ್ನು 2 ಭಾಗಗಳಾಗಿ ತೆರೆಗೆ ತರಲು ಆರ್.ಚಂದ್ರು ಪ್ಲ್ಯಾನ್ ಮಾಡಿದ್ದರು. ಸಿನಿಮಾ ಸೀಕ್ವೆಲ್ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಪ್ರೀಕ್ವೆಲ್‌ನಲ್ಲಿ ಉಪೇಂದ್ರ, ಸುದೀಪ್ ಹಾಗೂ ಶಿವಣ್ಣ ನಟಿಸಿದರೆ ಸೀಕ್ವೆಲ್‌ನಲ್ಲಿ ಪವನ್ ಕಲ್ಯಾಣ್ ಕೂಡ ಸೇರಿಕೊಳ್ಳಲಿದ್ದಾರೆ. ಇತ್ತೀಚೆಗೆ ಪವನ್ ಕಲ್ಯಾಣ್ 'ಕಬ್ಜ' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಇದೀಗ ಸೀಕ್ವೆಲ್‌ನಲ್ಲಿ ಪವರ್ ಸ್ಟಾರ್ ನಟಿಸ್ತಾರೆ ಎನ್ನಲಾಗ್ತಿದೆ.