ಅಪಘಾತದ ನಂತರ ಮೊದಲ ಫೋಟೊ ಹಂಚಿಕೊಂಡ ಅವೆಂಜರ್ಸ್ ನಟ ಜರ್ಮಿ
ಹೊಸ ವರ್ಷದ ದಿನ ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರಿರುವ 'ಅವೆಂಜರ್ಸ್' ಖ್ಯಾತಿಯ ನಟ ಜರ್ಮಿ ರೆನ್ನರ್ ಅವರು ಆಸ್ಪತ್ರೆಯಿಂದಲೇ ಅಭಿಮಾನಿಗಳಿಗಾಗಿ ವಿಶೇಷ ಪೋಸ್ಟ್ ಒಂದನ್ನು ಮಾಡಿದ್ದಾರೆ. ಹಾಸಿಗೆ ಮೇಲಿರುವ ತಮ್ಮ ಸೆಲ್ಫಿ ಹಂಚಿಕೊಂಡಿರುವ ಅವರು, ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಜರ್ಮಿ ಹಂಚಿಕೊಂಡಿರುವ ಸೆಲ್ಫಿಯಲ್ಲಿ ಅವರ ಮುಖಕ್ಕೆ ಗಾಯಗಳಾಗಿರುವುದನ್ನು ಕಾಣಬಹುದು. ಈ ಫೋಟೋಗೆ ಅನೇಕರು, ನಟ-ನಟಿಯರು & ಅಭಿಮಾನಿಗಳು ಪ್ರತಿಕ್ರಿಯಿಸಿ, ಶೀಘ್ರವೇ ಗುಣಮುಖರಾಗುವಂತೆ ಹಾರೈಸಿದ್ದಾರೆ.