ಪ್ರತಿ ಟನ್ ಕಬ್ಬಿಗೆ 2,850 ರೂ.-ಸಿಎಂ ಭರವಸೆ; ಹೋರಾಟ ಕೈ ಬಿಟ್ಟ ರೈತರು

ಪ್ರತಿ ಟನ್ ಕಬ್ಬಿಗೆ 2,850 ರೂ.-ಸಿಎಂ ಭರವಸೆ; ಹೋರಾಟ ಕೈ ಬಿಟ್ಟ ರೈತರು

ಬಾಗಲಕೋಟೆ: ಕಬ್ಬಿಗೆ ಸೂಕ್ತ ಬೆಲೆ ನಿಗದಿ ಮಾಡುವಂತೆ ಕಳೆದ 53 ದಿನಗಳಿಂದ ನಡೆಯುತ್ತಿದ್ದ ಕಬ್ಬು ಬೆಳೆಗಾರರ ಹೋರಾಟಕ್ಕೆ ಜಯ ಲಭಿಸಿದೆ. ಪ್ರತಿ ಟನ್ ಕಬ್ಬಿಗೆ 2,850 ರೂ. ದರ ಕೊಡಿಸುವುದಾಗಿ ಸಿಎಂ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ. ಇಂದು (ನ.21) ಸಿಎಂ ಬೊಮ್ಮಾಯಿ ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ಫೋನ್​ ಮಾಡಿ ಪ್ರತಿ ಟನ್ ಕಬ್ಬಿಗೆ 2,850 ರೂ. ಕೊಡಿಸುವುದಾಗಿ ತಿಳಿಸಿದರು. ಬಳಿಕ ಕಬ್ಬು ಬೆಳೆಗಾರರು ಹೋರಾಟ ಕೈ ಬಿಟ್ಟಿದ್ದಾರೆ.