ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯಾಗುವುದು ಖಚಿತ: ಸಂಭವನೀಯ ಅಭ್ಯರ್ಥಿಗಳ ನಿದ್ದೆಗೆಡಿಸಿದ ಕದಲೂರು ಉದಯ್

ಮಂಡ್ಯ :- ಕಳೆದೆರಡು ವರ್ಷಗಳಿಂದ ಮದ್ದೂರು ವಿಧಾನ ಸಭಾ ಕ್ಷೇತ್ರದಲ್ಲಿ ಸಮಾಜ ಸೇವೆ ಮೂಲಕ ಜನಮನ್ನಣೆ ಗಳಿಸಿದ್ದ ಸಮಾಜ ಸೇವಕ ಕದಲೂರು ಉದಯ್ ರಥ ಸಪ್ತಮಿ ದಿನದಂದು ಕ್ಷೇತ್ರದ ಜನತೆಗೆ ಸಿಹಿ ಸುದ್ದಿ ನೀಡಿದಾರೆ.
ಇನ್ನೋಂದು ವಾರದೊಳಗೆ ಎರಡು ರಾಷ್ಟ್ರೀಯ ಪಕ್ಷಗಳ ವರಿಷ್ಠರೊಂದಿಗೆ ಚರ್ಚಿಸಿ ಒಂದು ಪಕ್ಷದ ಟಿಕೆಟ್ ಪಡೆದು ಅಧಿಕೃತವಾಗಿ ಚುನಾವಣೆಗೆ ಸ್ಪರ್ಧಿಸುವುದು ಖಚಿತ ಎಂದರು.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರು ಪಕ್ಷಗಳಲ್ಲಿ ನನ್ನ ಒಡನಾಟವಿದೆ. ಆದರೇ ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷದ ಒಂದು ಟಿಕೆಟ್ ಪಡೆದು ಸ್ಪರ್ಧೆ ಮಾಡುವುದು ಶತಸಿದ್ಧ ಎಂದರು.
ಈಗಾಗಲೇ ಕಾಂಗ್ರೆಸ್, ಬಿಜೆಪಿ ಸಂಭವನೀಯ ಅಭ್ಯರ್ಥಿಗಳ ಘೋಷಣೆಯಾಗಿದಿಯೇ ವಿನಃ ಅಧಿಕೃತವಾಗಿ ಆಗಿಲ್ಲ, ಕೊನೆ ಕ್ಷಣದಲ್ಲೂ ಅಭ್ಯರ್ಥಿಗಳ ಘೋಷಣೆ ಬಳಿಕವೂ ಬದಲಾವಣೆ ಆಗಿರುವುದು ನಮ್ಮ ಕಣ್ಣ ಮುಂದೆ ಇದೆ. ಆಗಾಗಿ ಕಾಂಗ್ರೆಸ್ ಪಕ್ಷವೋ, ಬಿಜೆಪಿ ಪಕ್ಷವೋ ಅಥವಾ ಪಕ್ಷೇತರ ಅಭ್ಯರ್ಥಿ ಎಂಬುವುದನ್ನು ಹಿತೈಷಿಗಳು ಹಾಗೂ ಅಭಿಮಾನಿಗಳೊಂದಿಗೆ ಸಭೆ ನಡೆಸಿ ಇನ್ನೊಂದು ವಾರದೊಳಗೆ ತಿಳಿಸಲಾಗುವುದು ಎಂದರು.
ಕ್ಷೇತ್ರದಾದ್ಯಂತ ಸಮಾಜ ಸೇವೆಯಲ್ಲಿ ತೊಡಗಿರುವ ನನಗೆ ರಾಜಕೀಯ ಪಾದಾರ್ಪಣೆ ಮಾಡಿದರೇ ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ಪೂರಕ ವಾತಾವರಣ ನಿರ್ಮಾಣವಾಗಲಿದೆ ಎಂಬುದು ಕ್ಷೇತ್ರದ ಜನರ ಆಶಯ ಮತ್ತು ಒತ್ತಡವಿದೆ. ಇದಕ್ಕೆ ಪೂರಕವಾಗಿ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದರು.
ವರದಿ : ಗಿರೀಶ್ ರಾಜ್, ಮಂಡ್ಯ